ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ನಲ್ಲಿ ಭಾನುವಾರ ದಿ. ಎಲೈಟ್ ಸ್ಕ್ವಾಡ್ – 2 ತಂಡವು ಎರಡು ಗೆಲುವಿನೊಂದಿಗೆ ಸಂಭ್ರಮಿಸಿತು.
ಎಲೈಟ್ ಸ್ಕ್ವಾಡ್ 2 ತಂಡವು ಕಾಫಿ ಕ್ರಿಕೆಟರ್ಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿತು. ಕಾಫಿ ಕ್ರಿಕೆಟರ್ಸ್ ತಂಡ ನಿಗದಿತ 10 ಓವರ್ಗಳಲ್ಲಿ 2 ಎರಡು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತು. ಎಲೈಟ್ ಸ್ಕ್ವಾಟ್ 2 ತಂಡವು 8.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 118 ರನ್ ಸಿಡಿಸಿ ವಿಜಯದ ನಗೆ ಬೀರಿತು. ಕಾಫಿ ಕ್ರಿಕೆಟರ್ಸ್ ಪರ ತಳೂರು ವಿಕ್ಕಿ 19 ಎಸೆತಗಳಲ್ಲಿ 48 ರನ್, ರಾಮ್ಸ್ವರೂಪ್ ದೊಡ್ಡಮನೆ 25 ಎಸೆತಗಳಲ್ಲಿ 37 ರನ್ ಪೇರಿಸಿದರು. ಎಲೈಟ್ ಸ್ಕ್ವಾಟ್ 2 ತಂಡದ ರಾಹುಲ್ 3 ಸಿಕ್ಸರ್ ಮತ್ತು 11 ಬೌಂಡರಿ ಸೇರಿದಂತೆ 34 ಎಸೆತಗಳಲ್ಲಿ ಅಜೇಯ 73 ರನ್ ಸಿಡಿಸಿ ಮೈದಾನದಲ್ಲಿ ಮಿಂಚುಹರಿಸಿದರು. ಕಟ್ಟೆಮನೆ ಜಾಹ್ನವಿ 1 ಓವರ್ ಬೌಲ್ ಮಾಡಿ ಮಹಿಳಾ ಆಟಗಾರ್ತಿಯಾಗಿ ಗಮನ ಸೆಳೆದರು.
ದಿ. ಎಲೈಟ್ ಸ್ಕ್ವಾಡ್ 2 ತಂಡವು ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ವಿರುದ್ದ 8 ರನ್ಗಳಿಂದ ಜಯ ಗಳಿಸಿತು. ದಿ ಎಲೈಟ್ ಸ್ಕ್ವಾಡ್ ತಂಡ 5 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು. ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ 6 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿ ಸೀಲಿಗೆ ಶರಣಾಯಿತು. ದಿ ಎಲೈಟ್ ರಾಹುಲ್ 50 ರನ್, ಪ್ಲಾಂಟರ್ಸ್ ಕ್ಲಬ್ ತಂಡದ ದರ್ಶನ್ ಪರ್ಲಕೋಟಿ 2 ವಿಕೆಟ್ ಪಡೆದರು. ಪ್ಲಾಂಟರ್ಸ್ ಕ್ಲಬ್ ತಂಡದ ವರುಣ್ ಮೂಲೆಮಜಲು 27 ರನ್, ದಿ ಎಲೈಟ್ ಸ್ಕ್ವಾಡ್ದ ಎ ಎಸ್ ರಾಹುಲ್ 2 ವಿಕೆಟ್ ಪಡೆದರು.
ದಿ. ಮರಗೋಡಿಯನ್ಸ್ ತಂಡವು ಕೂರ್ಗ್ ಹಾಕ್ಸ್ ತಂಡದ ವಿರುದ್ದ 5 ರನ್ಗಳಿಂದ ಗೆದ್ದು ಬೀಗಿತು. ಮೊದಲು ಬ್ಯಾಟ್ ಮಾಡಿದ ಮರಗೋಡಿಯನ್ಸ್ 10 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 105 ರನ್ಗಳ ಗುರಿ ನೀಡಿತು. ಕೂರ್ಗ್ ಹಾಕ್ಸ್ ತಂಡ 7 ವಿಕೆಟ್ ಕಳೆದುಕೊಂಡು 99 ಗಳಿಸಿ ಸೋಲೊಪ್ಪಿಕೊಂಡಿತು. ಮರಗೋಡಿಯನ್ಸ್ ಪರ ಬೈಲೆ ಡ್ಯೂಕ್ ಕಾವೇರಿ 27 ಎಸೆತಕ್ಕೆ 58 ರನ್, ವರುಣ್ ರಾಜ್ ಬೇಕಲ್ 37 ರನ್ ಗಳ ಉಪಯುಕ್ತ ಕಾಣಿಕೆ ನೀಡಿದರು. ಕೂರ್ಗ್ ಹಾಕ್ಸ್ ತಂಡದ 7 ವಿಕೆಟ್ ನಷ್ಟಕ್ಕೆ 99 ಗಳಿಸಿ 5 ರನ್ಗಳಿಂದ ಸೋಲೊಪ್ಪಿಕೊಂಡಿತು. ಮರಗೋಡಿಯನ್ಸ್ ತಂಡದ ಶರ್ವಿನ 2 ವಿಕೆಟ್ ಕಿತ್ತರು.
ಇಂದಿನ ಪಂದ್ಯಗಳು
ಬೆ. 8.45 ; ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ – ದಿ. ಮಾರ್ಗೋಡಿಯನ್ಸ್
11 ; ಎಲೈಟ್ ಸ್ಕ್ವಾಟ್ 2 – ಕೂರ್ಗ್ ಹಾಕ್ಸ್
ಮ.1 ; ದಿ. ಮಾರ್ಗೋಡಿಯನ್ಸ್ – ಕಾಫಿ ಕ್ರಿಕೆಟರ್ಸ್
ಫೋಟೋ 21 ಎಂಡಿಕೆ 04 ; ಕಟ್ಟೆಮನೆ ಜಾಹ್ನವಿ ಬೌಲಿಂಗ್