ಮಾಧ್ಯಮದ ಎಲ್ಲ ಸಾಧ್ಯತೆಗಳ ಅನ್ವೇಷಣೆಗಾಗಿ ಹುಟ್ಟಿಕೊಂಡ ಸಂಸ್ಥೆಯೇ ನವಮಾಧ್ಯಮ ಪ್ರೈವೆಟ್ ಲಿಮಿಟೆಡ್. ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ದುರುಪಯೋಗ, ನಿಜವಾದ ಪತ್ರಕರ್ತನಿಗೆ ಬೆಲೆ ಸಿಗದೇ ಇರುವುದು. ಯಾವುದು ಸುದ್ದಿ, ಯಾವುದು ಹಣ ಪಡೆದ ಸುದ್ದಿ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.
ಜನರಿಗೆ ನಿಜವಾದ ಮಾಹಿತಿ ಎಂಬುದೇ ಸಿಗದಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಇದಕ್ಕೊಂದು ಪರಿಹಾರ ಹುಡುಕುವ ಪ್ರಯತ್ನವಾಗಿ ಈ ಸಂಸ್ಥೆ ಕೆಲಸ ಮಾಡುತ್ತಿದೆ. ಮುದ್ರಣ, ಡಿಜಿಟಲ್, ಮೊಬೈಲ್ ಆಪ್, ಇ-ರೇಡಿಯೋ ಮೊದಲಾದ ಸಾಧ್ಯತೆಗಳೊಡನೆ ಮಾಧ್ಯಮ ಲೋಕವನ್ನು ಪ್ರವೇಶಿಸಿದ್ದೇವೆ. ಇಂತಹುದೇ ಸಾಧ್ಯತೆಯ ಹುಡುಕಾಟದಲ್ಲಿ ನಾವು ಮುಂದಡಿ ಇಡುತ್ತೇವೆ. ಸಣ್ಣ ಮೊತ್ತದೊಂದಿಗೆ ಆರಂಭಗೊಂಡಿರುವ ಸಂಸ್ಥೆಯನ್ನು ಬೃಹತ್ತಾಗಿ ಕಟ್ಟುವ ಉದ್ದೇಶವಿದೆಯೇ ಹೊರತು ಇದರಿಂದ ಬೃಹತ್ ಗಳಿಕೆಯ ಆಸೆ ನಮಗಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಲು ಬಯಸುತ್ತೇವೆ.