ಅರಮಣಮಾಡ ಕ್ರಿಕೆಟ್ ; ಮಚ್ಚೇಟೀರ, ಉಳುವಂಗಡ, ಪಾರುವಂಗಡ ಮುನ್ನಡೆ
ಸಣ್ಣುವಂಡ ಕಿಶೋರ್ ನಾಚಪ್ಪ ಬಾಳೆಲೆ
ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ವಿಜಯಲಕ್ಷ್ಮೀ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಬಾಚಿನಾಡಂಡ ತಂಡ ಮೂರು ಬಾರಿ ಗೆದ್ದು ಬೀಗಿದೆ. ಪುರುಷರ ತಮಡ 2 ಬಾರಿ, ಒಮ್ಮೆ ಮಹಿಳೆಯರು ಗೆದ್ದು ಸಂಭ್ರಮಿಸಿದರು.
ಪುರುಷರ ಫಲಿತಾಂಶ ; ಮಂಡಂಗಡಕ್ಕೆ ಆದೇಂಗಡ ವಿರುದ್ದ 9 ವಿಕೆಟ್ ಜಯ ದೊರೆಯಿತು. ಆದೇಂಗಡ 2 ವಿಕೆಟ್ಗೆ 67 ರನ್ ದಾಖಲಿಸಿತು. ಮಂಡಂಗಡ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಮಂಡಂಗಡ ಚಿರಣ್ 38 ರನ್, ಆದೇಂಗಡ ಮಂಜು 32 ರನ್ ದಾಖಲಿಸಿದರು.
ಅಚ್ಚಪಂಡ ನಂದಿನೆರವಂಡವನ್ನು 10 ವಿಕೆಟ್ಗಳಿಂದ ಮಣಿಸಿತು. ನಂದಿನೆರವಂಡ 6 ವಿಕೆಟ್ಗೆ 41 ರನ್, ಅಚ್ಚಪಂಡ 2 ಓವರ್ಗಳಲ್ಲಿ ಪಂದ್ಯ ಮುಗಿಸಿತು. ಅಚ್ಚಪಂಡ ಅಯ್ಯಪ್ಪ 23 ರನ್, ನಂದಿನೆರವಂಡ ಕರಣ್ 10 ರನ್ ದಾಖಲಿಸಿದರು.
ಅತಿಥೇಯ ಅರಮಣಮಾಡಕ್ಕೆ ಚೋವಂಡ ವಿರುದ್ದ 9 ವಿಕೆಟ್ ಗೆಲುವು ದೊರೆಯಿತು. ಚೋವಂಡ 8 ವಿಕೆಟ್ಗೆ 55 ರನ್, ಅರಮಣಮಾಡ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಅರಮಣಮಾಡ ಬೋಪಯ್ಯ 24, ಚೋವಂಡ ಪೊನ್ನಣ್ಣ 16 ರನ್ ಗಳಿಸಿದರು.
ಚೆರುಮಂದAಡ ತಂಡಕ್ಕೆ ಕಾಳಮಂಡ ವಿರುದ್ದ 46 ರನ್ಗಳ ಜಯ ದೊರೆಯಿತು. ಚೆರುಮಂದAಡ ಗಣಪತಿ ಬಾರಿಸಿದ 49 ರನ್ಗಳ ನೆರವಿನಿಂದ 6 ವಿಕೆಟ್ ಕಳೆದುಕೊಂಡು 119 ರನ್ ದಾಖಲಿಸಿತು. ಕಾಳಮಂಡ 4 ವಿಕೆಟ್ ಕಳೆದುಕೊಂಡು 73 ರನ್ ಪಡೆಯಿತು. ಕಾಳಮಂಡ ಅಪ್ಪಚ್ಚು 49 ರನ್ ಚಚ್ಚಿದರು.
ಮಚ್ಚೇಟೀರಕ್ಕೆ ಚಙಣಮಾಡ ವಿರುದ್ದ 6 ವಿಕೆಟ್ ಜಯ ದೊರೆಯಿತು. ಚಙಣಮಾಡ ಮದನ್ 28, ಸೂರಜ್ 29 ರನ್ಗಳ ಕಾಣಿಕೆಯಿಂದ ವಿಕೆಟ್ ನಷ್ಟವಿಲ್ಲದೆ 65 ರನ್ ದಾಖಲಿಸಿತು. ಮಚ್ಚೇಟೀರ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕಿರಣ್ ಪೂವಯ್ಯ 32 ರನ್ಗಳಿಂದ ಪಂದ್ಯ ಗೆಲ್ಲಿಸಿದರು. ಕಾಳಮಂಡ ದಿವಿನ್ 2 ವಿಕೆಟ್ ಪಡೆದರು.
ಬಾಚಿನಾಡಂಡಕ್ಕೆ ಕೋಡಿಮಣಿಯಂಡ ವಿರುದ್ದ 10 ವಿಕೆಟ್ ಗೆಲುವು ದೊರೆಯಿತು. ಕೋಡಿಮಣಿಯಂಡ 4 ವಿಕೆಟ್ಗೆ 70 ರನ್ ಗಳಿಸಿತು. ಬಾಚಿನಾಡಂಡ ಶ್ರೇಯಸ್ 42, ನಿಖಿಲ್ 33 ರನ್ ಕಾಣಿಕೆಯಿಂದ 75 ರನ್ ಗಳಿಸಿತು. ಕೋಡಿಮಣಿಯಂಡ ನವೀನ್ 30 ರನ್ ದಾಖಲಿಸಿದರು.
ಮುಕ್ಕಾಟೀರ (ಕುಂಬಳದಾಳ್) ತಂಡವು ಕೇತೀರವನ್ನು 10 ವಿಕೆಟ್ಗಳಿಂದ ಸೋಲಿಸಿತು. ಕೇತೀರ 2 ವಿಕೆಟ್ಗೆ 28 ರನ್ ದಾಖಲಿಸಿತು. ಮುಕ್ಕಾಟೀರ ವಿಕೆಟ್ ಕಳೆದುಕೊಳ್ಳದೆ ಗುರಿ ಸಾಧಿಸಿದರು.
ಪಾರುವಂಗಡವು ಮಾಚಿಮಾಡವನ್ನು 9 ವಿಕೆಟ್ಗಳಿಂದ ಸೋಲಿಸಿತು. ಪಾರುವಂಗಡ 1 ವಿಕೆಟ್ ನಷ್ಟಕ್ಕೆ 90 ರನ್, ಮಾಚಿಮಾಡ 2 ವಿಕೆಟ್ ಕಳೆದುಕೊಂಡು 82 ರನ್ ದಾಖಲಿಸಿ ಸೋಲನುಭವಿಸಿತು.
ಕೋಡಿಮಣಿಯಂಡಕ್ಕೆ ನಾಪಂಡ ವಿರುದ್ದ 25 ರನ್ಗಳ ಗೆಲುವು ದೊರೆಯಿತು. ಕೋಡಿಮಣಿಯಂಡ 8 ವಿಕೆಟ್ ನಷ್ಟಕ್ಕೆ 107 ರನ್, ನಾಪಂಡ 6 ವಿಕೆಟ್ಗೆ 82 ರನ್ ದಾಖಲಿಸಿತು.
ಬಾಚಿನಾಡಂಡ ತಂಡಕ್ಕೆ ನುಚಿಮಣಿಯಂಡ ವಿರುದ್ದ 8 ವಿಕೆಟ್ ಜಯ ದೊರೆಯಿತು. ನುಚ್ಚಿಮಣಿಯಂಡ 8 ವಿಕೆಟ್ ಕಳೆದುಕೊಂಡು 59 ರನ್, ಬಾಚಿನಾಡಂಡ 2 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತು.
ಉಳುವಂಗಡ ತಂಡಕ್ಕೆ ಕುಂಞರ ವಿರುದ್ದ 9 ವಿಕೆಟ್ ಗೆಲುವು ಲಭಿಸಿತು. ಕುಂಞರ 54 ರನ್, ಉಳುವಂಗಡ 1 ವಿಕೆಟ್ ನಷ್ಟಕ್ಕೆ 60 ರನ್ ಸಿಡಿಸಿತು.
ಮಹಿಳಾ ವಿಭಾಗ ; ಅಚ್ಚಪಂಡ ತಂಡಕ್ಕೆ ಕಾಂಡAಡ ವಿರುದ್ದ 7 ವಿಕೆಟ್ ಜಯ ದೊರೆಯಿತು. ಅಚ್ಚಪಂಡ 3 ವಿಕೆಟ್ ಕಳೆದುಕೊಂಡು 47 ರನ್, ಕಾಂಡAಡ 3 ವಿಕೆಟ್ ನಷ್ಟಕ್ಕೆ 25 ರನ್ ದಾಖಲಿಸಿತು. ಕೊಙಂಡಕ್ಕೆ ಮೂಕಳೇರ ವಿರುದ್ದ 9 ವಿಕೆಟ್ ಜಯ ದೊರೆಯಿತು. ಕೊಙಂಡ 41 ರನ್ ದಾಖಲಿಸಿತು. ಮೂಕಳೇರ 3 ವಿಕೆಟ್ಗೆ 33 ರನ್ ಗಳಿಸಲಷ್ಟೆ ಶಕ್ತವಾಯಿತು. ಕಡೇಮಾಡ ತಂಡವು ಕೊಣಿಯಂಡ ವಿರುದ್ದ 18 ರನ್ಗಳ ಗೆಲುವ ಪಡೆದುಕೊಂಡಿತು. ಕಡೇಮಾಡ ವಿಕೆಟ್ ಕಳೆದುಕೊಳ್ಳದೆ 48 ರನ್ ಗುರಿ ನೀಡಿತು. ಕೊಣಿಯಂಡ 29 ರನ್ ಗಳಿಸಿತು. ಬಾಚಿನಾಡಂಡ ತಂಡವು ಕೋಟ್ರಮಾಡ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿತು. ಕೋಟ್ರಮಾಡ ವಿಕೆಟ್ ಕಳೆದುಕೊಳ್ಳದೆ 38 ರನ್, ಬಾಚಿನಾಡಂಡ 39 ರನ್ ಗಳಿಸಿತು.
ಪಂದ್ಯ ಶ್ರೇಷ್ಠರು ; ಆದೇಂಗಡ ಮಂಜು, ನಂದಿನೆರವAಡ ಕರಣ್, ಚೋವಂಡ ಪೊನ್ನಣ್ಣ, ಕಾಳಮಂಡ ಅಪ್ಪಚ್ಚು, ಚಙಣಮಾಡ ಸೂರಜ್, ಕೋಡಿಮಣಿಯಂಡ ನವೀನ್, ಕೇತೀರ ಮೋಹಿತ್, ಕಾಂಡAಡ ಕೀರ್ತನಾ, ಮೂಕಳೇರ ಮೀರಾ ಅಶೋಕ್, ಕೊಣಿಯಂಡ ಅಮೂಲ್ಯ, ಕೋಟ್ರಮಾಡ ಶೀತಲ್, ಮಾಚಿಮಾಡ ಕಾರ್ಯಪ್ಪ, ನಾಪಂಡ ವಿಶು, ನುಚ್ಚಿಮಣಿಯಂಡ ಕುಶಾಲಪ್ಪ, ಕುಂಞÂರ ಭರತ್.
ಇಂದಿನ ಪಂದ್ಯಗಳು
(ಪುರುಷ) ಮೈದಾನ – 1
9. ; ಅಡ್ಡೇಂಗಡ- ಕಳ್ಳೇಂಗಡ (ಬೆಳ್ಳೂರು)
10 ; ಮುದ್ದಿಯಡ – ಕೊಟ್ಟ್ಕತ್ತೀರ
11 ; ಮೇವಡ – ಚಿಯಕ್ಪೂವಂಡ
12 ; ಅಳಮೇಂಗಡ- ಬಲ್ಯಮೀದೇರಿರ
1 ; ಕುಞಂಗಡ-ಮಣವಟ್ಟೀರ
2 ; ಪಾಸುರ/ಕುಂಞಯಡ-ಕುಟ್ಟAಡ/ಕಲ್ಲೇಂಗಡ (ನಾಪೋಕ್ಲು)
3 ; ಮುಕ್ಕಾಟೀರ (ಕಡಗದಾಳ್)-ಪುಗ್ಗೇರ
4 ; ಆಚೆಯಡ-ಮೊಳ್ಳೇರ
ಮೈದಾನ – 2
9 ; ತಿರುನೆಲ್ಲಿಮಾಡ-ಚೊಟ್ಟಂಗಡ
10 ; ಪಾಸುರ-ಕುಂಞಂಯಂಡ
11 ; ಕುಟ್ಟಂಡ (ಕಾರ್ಮಾಡು) – ಕಲ್ಲೇಂಗಡ (ನಾಪೋಕ್ಲು)
12 ; ಮಾಣೀರ-ಕಾಯಪಂಡ
1 ; ಮುದ್ದುರ-ಪಾಲೇಂಗಡ
2 ; ಐಚಂಡ-ಮರುವಂಡ
(ಮಹಿಳೆ) ಮೈದಾನ – 2
ಮ. 1 ; ತೆಕ್ಕಡ-ಮೇವಡ
2 ; ಮುದ್ದಿಯಡ-ಅಜ್ಜಿಕುಟ್ಟೀರ
3 ; ಅಚ್ಚಕಾಳೇರ – ಕಾಯಪಂಡ
ಫೋಟೋ 23 ಜಿಕೆಪಿ 05 ; ಚೋವಂಡ ಬೌಲಿಂಗ್
06 ; ಬಾಚಿನಾಡಂಡ ಬೌಲಿಂಗ್
07 ; ಅಚ್ಚಪಂಡ ಬ್ಯಾಟಿಂಗ್