ಅಜ್ಜಮಾಡ ರಮೇಶ್ ಕುಟ್ಟಪ್ಪ ನಾಪೋಕ್ಲು
ಕೊಡವ ಕುಟುಂಬ ತಂಡಗಳ ನಡುವಿನ ೨೪ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವ ಕುಂಡ್ಯೋಳAಡ ಹಾಕಿ ಕಾರ್ನಿವಲ್ನ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಜೇತರಾದ ನೆಲ್ಲಮಕ್ಕಡ, ಪುದಿಯೊಕ್ಕಡ, ನೆರವಂಡ, ಕುಪ್ಪಂಡ (ಕೈಕೇರಿ) ಕುಟುಂಬ ತಂಡಗಳು ಕ್ವಾರ್ಟರ್ ಪೈನಲ್ ಹಂತಕ್ಕೆ ಪ್ರವೇಶಿಸಿವೆ. ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ಹಾಕಿ ನಮ್ಮೆ ಆಯೋಜಿಸಲಾಗಿದೆ.
ಅಂಜಪರವಂಡ, ಕೂತಂಡ, ಮುಕ್ಕಾಟೀರ (ಬೊಂದ), ಕಲಿಯಂಡ ಕುಟುಂಬ ತಂಡಗಳು ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲುವುದರ ಮೂಲಕ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಆಟ ಮುಗಿಸಿದ್ದಾರೆ.
ಪ್ರಥಮ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಮಯ್ಯ, ರೋಹನ್, ಅಯ್ಯಪ್ಪ (೨) ಬಾರಿಸಿದ ಗೋಲಿನಿಂದ ನೆಲ್ಲಮಕ್ಕಡ ೪-೦ ಗೋಲಿನಿಂದ ಅಂಜಪರವಂಡ ತಂಡವನ್ನು ಪರಾಭವಗೊಳಿಸುವ ಮೂಲಕ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು. ಪುದಿಯೊಕ್ಕಡ ೩-೧ ಗೋಲಿನಿಂದ ಕೂತಂಡ ತಂಡವನ್ನು ಸೋಲಿಸುವ ಮೂಲಕ ಕ್ವಾರ್ಟರ್ಫೈನಲ್ ಹಂತಕ್ಕೆ ಪ್ರವೇಶಿಸಿತು. ವಿಜೇತ ತಂಡದ ಪರ ೬ ಮತ್ತು ೫೦ನೇ ನಿಮಿಷದಲ್ಲಿ ಅಂತಾರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ, ೧೬ನೇ ನಿಮಿಷದಲ್ಲಿ ಮಿಥುನ್ ಪೊನ್ನಪ್ಪ ಗೋಲು ಬಾರಿಸಿದರು. ಕೂತಂಡ ರಿಕ್ಕಿ ಕುಶಾಲಪ್ಪ ೪೦ನೇ ನಿಮಿಷದಲ್ಲಿ ಗೋಲು ದಾಖಲಿಸುವುದರ ಮೂಲಕ ಸೋಲಿನ ಅಂತರ ಕಡಿಮೆ ಮಾಡಿದರು.
ಟೈಬ್ರೇಕರ್ನಲ್ಲಿ ಮುಕ್ಕಾಟೀರ (ಬೊಂದ) ತಂಡವನ್ನು ನೆರವಂಡ ತಂಡ ೪-೧ ಗೋಲಿನಿಂದ ಸೋಲಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ೨-೨ ಗೋಲಿನ ಸಮಬಲ ಸಾಧಿಸಿತ್ತು. ೧ನೇ ನಿಮಿಷದಲ್ಲಿ ನೆರವಂಡ ನಾಚಪ್ಪ, ೨೦ನೇ ನಿಮಿಷದಲ್ಲಿ ದಿಶಾನ್ ದೇವಯ್ಯ ಹಾಗೂ ೧೧ನೇ ನಿಮಿಷದಲ್ಲಿ ನಿಶಾಂತ್, ೩೦ನೇ ನಿಮಿಷದಲ್ಲಿ ಎಂ.ಬಿ. ಅಯ್ಯಪ್ಪ ಗೋಲು ಗಳಿಸಿದರು. ಟೈಬ್ರೇಕರ್ನಲ್ಲಿ ಕುಪ್ಪಂಡ (ಕೈಕೇರಿ) ತಂಡ ೪-೨ ಗೋಲಿನಿಂದ ಕಲಿಯಂಡ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ೧-೧ ಗೋಲಿನ ಸಮಬಲ ಸಾಧಿಸಿತ್ತು. ೧ನೇ ನಿಮಿಷದಲ್ಲಿ ಕುಪ್ಪಂಡ ಸೋಮಯ್ಯ ಹಾಗೂ ೧೮ನೇ ನಿಮಿಷದಲ್ಲಿ ಕಲಿಯಂಡ ಭರತ್ ಗೋಲು ಹೊಡೆದರು.
(ಚಿತ್ರ:೨೩ಎಂಡಿಕೆಎ೧- ನೆಲ್ಲಮಕ್ಕಡ- ಅಂಜಪರವಂಡ ಸೆಣಸಾಟ)
=====
ಪಂದ್ಯ ಪುರುಷರು
ಮಂಗಳವಾರ ನಡೆದ ಪಂದ್ಯದಲ್ಲಿ ಅಂಜಪರವAಡ ಕಾರ್ಯಪ್ಪ, ಕೂತಂಡ ಸಿ. ಬೋಪಣ್ಣ, ಮುಕ್ಕಾಟೀರ ಬಿ. ಅಯ್ಯಪ್ಪ, ಕಲಿಯಂಡ ಚೆಂಗಪ್ಪ ಪಂದ್ಯ ಪುರುಷ ಬಹುಮಾನಕ್ಕೆ ಭಾಜನರಾದರು.
======
ಇಂದಿನ ಪ್ರೀಕ್ವಾರ್ಟರ್ ಫೈನಲ್ ಪಂದ್ಯ
* ಕುಲ್ಲೇಟೀರ- ಐಚಂಡ (೯.೩೦)
* ಚೆಪ್ಪುಡಿರ- ಚೆಕ್ಕೇರ (೧೦.೩೦)
* ಚೇನಂಡ- ಕರಿನೆರವಂಡ (೧೨)
* ಬೊವೇರಿಯಂಡ- ಐಚೆಟ್ಟೀರ (೧)
======