(ಸಿ) ಜಾವಿನುದಾರನು ಯಾವನಾದರೂ ಇದ್ದರೆ ಅವನಿಂದ ಸಲ್ಲತಕ್ಕ ಭೂ ಕಂದಾಯದ ಬಾಕಿಯಾಗಿದ್ದರೆ ಹೇಗೋ ಹಾಗೆ ಆ ಜಾವಿನುದಾರನಿಂದ (ಡಿ) ಸಹ ಭದ್ರತೆಯನ್ನೊಳಗೊಂಡ ಸ್ವತ್ತು ಯಾವುದಾದರೂ ಇದ್ದರೆ ಅದರಿಂದ, ಭೂ ಕಂದಾಯದ ವಸೂಲಿಯ ಸಲುವಾಗಿ ಸ್ಥಿರ ಸ್ವತ್ತನ್ನು ಮಾರಾಟ ಮಾಡುವ ಪ್ರಕ್ರಿಯೆಯ ಮೇರೆಗೆ. ೮೯ಎಫ್. ಬ್ಯಾಂಕಿನ ಅಧಿಕಾರಿಗಳು ಮಾರಾಟಗಳಲ್ಲಿ ಸವಾಲು ಮಾಡಲಾಗದು. ಈ ಅಧ್ಯಾಯದ ಉಪಬಂಧಗಳ ಮೇರೆಗೆ ನಡೆಸಲಾದ ಚರ ಅಥವಾ ಸ್ಥಿರ ಸ್ವತ್ತಿನ ಯಾವುದೇ ಮಾರಾಟದಲ್ಲಿ, ಕೃಷಿ ಹಾಗೂ ಗ್ರಾವಿಣ ಅಭಿವೃದ್ಧಿ ಬ್ಯಾಂಕಿನ ಅಥವಾ ರಾಜ್ಯ ಕೃಷಿ ಮತ್ತು ಗ್ರಾವಿಣ ಅಭಿವೃದ್ಧಿ ಬ್ಯಾಂಕಿನ ಯಾರೇ ಅಧಿಕಾರಿ ಅಥವಾ ನೌಕರ, ಅವನು ಯಾವ ಬ್ಯಾಂಕಿನ ಅಧಿಕಾರಿಯು ಅಥವಾ ನೌಕರನು ಇರುತ್ತಾನೋ ಆ ಬ್ಯಾಂಕಿನ ಪರವಾಗಿ ಹೊರತು, ಮತ್ತು ಅಂಥ ಮಾರಾಟಕ್ಕೆ ಸಂಬಂಧಿಸಿದ ಯಾವುದೇ ಕರ್ತವ್ಯದ ಚಾಲನೆಯನ್ನು ಹೊಂದಿದ ಯಾವ ವ್ಯಕ್ತಿಯೂ ಅಂಥ ಸ್ವತ್ತಿನ ಹಿತಾಸಕ್ತಿಗಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸವಾಲು ಮಾಡತಕ್ಕುದಲ್ಲ ಅಥವಾ ಅದನ್ನು ಆರ್ಜಿಸತಕ್ಕುದಲ್ಲ ಅಥವಾ ಆರ್ಜಿಸಲು ಪ್ರಯತ್ನಿಸತಕ್ಕುದಲ್ಲ.