೦೪ ಸಹಕಾರ ಸಂಘದಲ್ಲಿ ನಡೆಸುವ ವಹಿವಾಟು ಮತ್ತು ಮಾರಾಟದ ಉತ್ಪತ್ತಿಯಿಂದ ಯಾವುದೇ ಹಣ ಉಳಿದರೆ, ಅದನ್ನು ಮಾರಾಟ ಮಾಡಿದ ಸ್ವತ್ತಿನಲ್ಲಿ ತಾನು ಹಿತಾಸಕ್ತಿ ಹೊಂದಿರುವುದಾಗಿ ರುಜುವಾತುಪಡಿಸುವ ವ್ಯಕ್ತಿಗೆ, ಅಥವಾ ಅಂಥ ವ್ಯಕ್ತಿಗಳು ಒಬ್ಬನಿಗಿಂತ ಹೆಚ್ಚಾಗಿದ್ದರೆ, ಆಗ ಅಂಥ ವ್ಯಕ್ತಿಗಳಿಗೆ, ಅವರ ಜಂಟಿ ರಸೀದಿಯ ಮೇಲೆ ಅಥವಾ ಕೃಷಿ ಮತ್ತು ಗ್ರಾವಿಣ ಅಭಿವೃದ್ಧಿ ಬ್ಯಾಂಕು ನಿರ್ಧರಿಸಬಹುದಾದಂತೆ ಅದರಲ್ಲಿ ಅನುಕ್ರಮವಾಗಿ ಅವರವರಿಗಿರುವ ಹಿತಾಸಕ್ತಿಗೆ ಅನುಸಾರವಾಗಿ ಸಂದಾಯ ಮಾಡತಕ್ಕುದು ಪರಂತು, ಅಂಥ ಯಾವುದೇ ಸಂದಾಯಗಳನ್ನು ಮಾಡುವುದಕ್ಕೆ ಮುಂಚೆ, (ಎ) ಅಡಮಾನಕಾರನಿಂದ ಕೃಷಿ ಮತ್ತು ಗ್ರಾವಿಣ ಅಭಿವೃದ್ಧಿ ಬ್ಯಾಂಕಿಗೆ ಬರಬೇಕಾದ ಭದ್ರತೆಯಿಲ್ಲದ ಬಾಕಿಗಳಿಗೆ ಸರಿ ಹೊಂದಿಸಬಹುದು, ಮತ್ತು (ಬಿ) ಅಡಮಾನಕಾರನು ಯಾವ ಸದಸ್ಯನಿಗೆ ಅಥವಾ ಹಿಂದಿನ ಸದಸ್ಯನಿಗೆ ಋಣಿಯಾಗಿ ದ್ದಾನೋ ಆ ಯಾರೇ ಸದಸ್ಯನಿಂದ ಅಥವಾ ಹಿಂದಿನ ಸದಸ್ಯನಿಂದ ಬರಬೇಕಾದ ಭದ್ರತೆಯಿಲ್ಲದ ಬಾಕಿಗಳಿಗೆ ಸಹ ಅಂಥ ಸದಸ್ಯನು ಮತ್ತು ಹಿಂದಿನ ಸದಸ್ಯನು ಕೊಟ್ಟ ಲಿಖಿತ ಅಧಿಕಾರ ಪತ್ರದ ಮೇರೆಗೆ ಮತ್ತು ಅವಶ್ಯವೆಂದು ಭಾವಿಸಬಹುದಾದಂಥ ವಿಚಾರಣೆಯನ್ನು ನಡೆಸಿದ ತರುವಾಯ ಸರಿಹೊಂದಿಸಬಹುದು.
