(ಎ) ಮಾರಾಟ ಮಾಡಲಾದ ಅಡಮಾನ ಸ್ವತ್ತು ಅಡಮಾನಕಾರನ ಅಥವಾ ಅವನ ಪರವಾಗಿ ಯಾವೊಬ್ಬ ವ್ಯಕ್ತಿಯ, ಅಥವಾ ರಾಜ್ಯ ಕೃಷಿ ಮತ್ತು ಗ್ರಾಮಿಣ ಅಭಿವೃದ್ಧಿ ಬ್ಯಾಂಕಿನ ಅಥವಾ ಕೃಷಿ ಮತ್ತು ಗ್ರಾವಿಣ ಅಭಿವೃದ್ಧಿ ಬ್ಯಾಂಕಿನ ಹೆಸರಿಗೆ ಅಡಮಾನ ಮಾಡಿದ ತರುವಾಯ ಅಡಮಾನಕಾರನು ಸೃಜಿಸಿದ ಹಕ್ಕಿನ ಅಡಿಯಲ್ಲಿ ಕ್ಲೇಮು ಮಾಡುವ ಯೊವೊಬ್ಬ ವ್ಯಕ್ತಿಯ ಅನುಭೋಗದಲ್ಲಿರುವಲ್ಲಿ ಮತ್ತು ಹಿಂದೆ ಹೇಳಿದ ಉಪಪ್ರಕರಣದ ಮೇರೆಗೆ ಆ ಸಂಬಂಧದಲ್ಲಿ ಪ್ರಮಾಣಪತ್ರವನ್ನು ಕೊಟ್ಟಿರುವಲ್ಲಿ, ಡೆಪ್ಯೂಟಿ ಕವಿಷನರನು ಖರೀದಿದಾರನ ಅರ್ಜಿಯ ಮೇಲೆ ಆ ಸ್ವತ್ತಿನ ಸ್ವಾಧೀನವನ್ನು ಅಂಥ ಖರೀದಿದಾರನಿಗೆ ಅಥವಾ ಅವನು ತನ್ನ ಪರವಾಗಿ ವಶಾವಣೆ ಪಡೆಯಲು ನೇಮಕ ಮಾಡಬಹುದಾದ ವ್ಯಕ್ತಿಗೆ ಒಪ್ಪಿಸಿ ವಶಾವಣೆ ಮಾಡುವಂತೆ ಆದೇಶಿಸತಕ್ಕುದು.
(ಬಿ) ಮಾರಾಟ ಮಾಡಲಾದ ಸ್ವತ್ತು ಗೇಣಿದಾರನ ಅಥವಾ ಅದರ ಅನುಭೋಗಕ್ಕೆ ಹಕ್ಕುಳ್ಳ ಇತರ ವ್ಯಕ್ತಿಯ ಅನುಭೋಗದಲ್ಲಿರುವಲ್ಲಿ ಮತ್ತು ಈ ಹಿಂದೆ ಹೇಳಿದ ಉಪ ಪ್ರಕರಣದ ಮೇರೆಗೆ ಆ ಸಂಬಂಧದಲ್ಲಿ ಪ್ರಮಾಣ ಪತ್ರವನ್ನು ನೀಡಿರುವಲ್ಲಿ,ಡೆಪ್ಯುಟಿ ಕವಿಷನರನು ಖರೀದಿದಾರನ ಅರ್ಜಿಯ ಮೇಲೆ ಮತ್ತು ಅಂಥ ಗೇಣಿದಾರರಿಗೆ ಅಥವಾ ಇತರ ವ್ಯಕ್ತಿಗಳಿಗೆ, ನೋಟೀಸು ಕೊಟ್ಟ ತರುವಾಯ,ಮಾರಾಟದ ಪ್ರಮಾಣಪತ್ರದ ಪ್ರತಿಯನ್ನು ಸ್ವತ್ತಿನ ಮೇಲೆ ಎದ್ದು ಕಾಣುತ್ತದೆ.
Leave a comment