PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಮೈಸೂರಿನಲ್ಲಿ ವೈದ್ಯಕೀಯ ಲೋಕದ ಮಹಾ ವಿಸ್ಮಯ..! ಪೀಸ್ ಆಗಿದ್ದ ಯುವಕನ ಕೈ ಮರು ಜೋಡಣೆ ಸಕ್ಸಸ್..!
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಮೈಸೂರಿನಲ್ಲಿ ವೈದ್ಯಕೀಯ ಲೋಕದ ಮಹಾ ವಿಸ್ಮಯ..! ಪೀಸ್ ಆಗಿದ್ದ ಯುವಕನ ಕೈ ಮರು ಜೋಡಣೆ ಸಕ್ಸಸ್..!
ಮುಖಪುಟಮೈಸೂರು ನಗರ

ಮೈಸೂರಿನಲ್ಲಿ ವೈದ್ಯಕೀಯ ಲೋಕದ ಮಹಾ ವಿಸ್ಮಯ..! ಪೀಸ್ ಆಗಿದ್ದ ಯುವಕನ ಕೈ ಮರು ಜೋಡಣೆ ಸಕ್ಸಸ್..!

Prathinidhi News
Last updated: December 9, 2025 12:44 pm
Prathinidhi News
Published December 9, 2025
Share
SHARE

ಮೈಸೂರು, ಡಿಸೆಂಬರ್‌ 9, 2025 : ಮೈಸೂರಲ್ಲಿ ವೈದ್ಯಕೀಯ ವಿಸ್ಮಯವೊಂದು ನಡೆದಿದೆ. ವ್ಯಕ್ತಿಯೋರ್ವನ ತುಂಡಾದ ಕೈಯನ್ನು ಮರುಜೋಡಿಸಿರೋ ಮಣಿಪಾಲ್ ಆಸ್ಪತ್ರೆ ವೈದ್ಯರು ದಾಖಲೆ ಬರೆದಿದ್ದಾರೆ.

ಕರೆಂಟ್ ಇಲ್ಲದ ವೇಳೆಯಲ್ಲಿ ಕೆಟ್ಟು ಹೋಗಿದ್ದ ಹುಲ್ಲು ಕಟಾವು ಮಾಡುವ ಯಂತ್ರವನ್ನು ರಿಪೇರಿ ಮಾಡುತ್ತಿದ್ದ ವೇಳೆ ಹಠಾತ್ತನೆ ಕರೆಂಟ್ ಬಂದ ಪರಿಣಾಮ ವ್ಯಕ್ತಿಯ ಕೈ ಯಂತ್ರಕ್ಕೆ ಸಿಲುಕಿ ಸಂಪೂರ್ಣವಾಗಿ ತುಂಡಾಗಿತ್ತು. ಆದರೆ, ಮೈಸೂರಿನ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರು ನಡೆಸಿದ 5 ಗಂಟೆಗಳ ಸುದೀರ್ಘ ಮತ್ತು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಇದೀಗ ಆತನ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದು ಆತನ ಕೈಯನ್ನು ಮರು ಜೋಡಿಸಲಾಗಿದೆ.

ಅವಘಡ ಸಂಭವಿಸಿದಾಗ ಕೈ ಮಣಿಕಟ್ಟಿನ ಭಾಗದಿಂದ ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಆದರೆ ಧೃತಿಗೆಡದ ಯುವಕ ಮತ್ತು ಸಹೋದ್ಯೋಗಿಗಳು, ಘಟನೆ ನಡೆದ ಕೇವಲ ಎರಡು ಗಂಟೆಯೊಳಗೆ ತುಂಡಾದ ಕೈಯೊಂದಿಗೆ ಮಣಿಪಾಲ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಧಾವಿಸಿದ್ದರು. ಶೀಘ್ರ ಆಸ್ಪತ್ರೆ ತಲುಪಿದ್ದು ಮತ್ತು ವೈದ್ಯರು ಕ್ಷಿಪ್ರವಾಗಿ ತೆಗೆದುಕೊಂಡ ನಿರ್ಧಾರವೇ ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ರೋಗಿಯ ದೇಹ ಮತ್ತು ಮಾನಸಿಕ ಸ್ಥಿತಿಯನ್ನು ಸ್ಥಿರಗೊಳಿಸಿ, ಶಸ್ತ್ರಚಿಕಿತ್ಸೆಗೆ ಸಜ್ಜುಗೊಳಿಸಲಾಯಿತು.ಇದು ವಿಶೇಷ ಶಸ್ತ್ರಚಿಕಿತ್ಸೆಯಾಗಿದ್ದು, ಹಿರಿಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಅಜಯ್ ಹೆಗ್ಡೆ ಮತ್ತು ಪ್ಲಾಸ್ಟಿಕ್ ಸರ್ಜನ್ ಡಾ. ವಿಜಯ್ ಕುಮಾರ್ ಎನ್. ನೇತೃತ್ವದ ತಂಡಕ್ಕೆ ಇದೊಂದು ದೊಡ್ಡ ಸವಾಲಾಗಿತ್ತು.

ಮೊದಲ ಹಂತದಲ್ಲಿ ಡಾ. ಅಜಯ್ ಹೆಗ್ಡೆ ಅವರ ತಂಡ, ರಕ್ತನಾಳಗಳ ಜೋಡಣೆಗೆ ಅನುಕೂಲವಾಗುವಂತೆ ‘ಪ್ರಾಕ್ಸಿಮಲ್ ರೋ ಕಾರ್ಪೆಕ್ಟಮಿ’ (Proximal Row Carpectomy) ವಿಧಾನವನ್ನು ಬಳಸಿತು. ಮಣಿಕಟ್ಟಿನ ಜಜ್ಜಿಹೋದ ಸಣ್ಣ ಮೂಳೆಗಳನ್ನು ತೆಗೆದುಹಾಕಿ, ಕೆ-ವೈರ್ ಮತ್ತು ಬಾಹ್ಯ ಜೋಡಣೆ ಸಾಧನದ ಮೂಲಕ ಮಣಿಕಟ್ಟಿನ ರಚನೆಯನ್ನು ಮರು ರೂಪಿಸಲಾಯಿತು.ಇದಾದ ಬಳಿಕ ಡಾ. ವಿಜಯ್ ಕುಮಾರ್ ಅವರ ತಂಡವು ಅತ್ಯಂತ ಸವಾಲಿನ ಕೆಲಸಕ್ಕೆ ಕೈಹಾಕಿತು. ಮೈಕ್ರೋವಾಸ್ಕುಲರ್ ತಂತ್ರಜ್ಞಾನದ ಮೂಲಕ ಕತ್ತರಿಸಿ ಹೋಗಿದ್ದ ರಕ್ತನಾಳಗಳು, ಸೂಕ್ಷ್ಮ ನರಗಳು ಮತ್ತು ಸ್ನಾಯುರಜ್ಜುಗಳನ್ನು ಮರುಜೋಡಿಸಲಾಯಿತು. ಸತತ ಐದು ಗಂಟೆಗಳ ಶ್ರಮದ ನಂತರ, ಜೋಡಿಸಲಾದ ಕೈಯಲ್ಲಿ ರಕ್ತಸಂಚಾರ ಪುನರಾರಂಭಗೊಂಡಿದೆ. ವೈದ್ಯರ ಶ್ರಮ ಸಾರ್ಥಕಗೊಂಡಿದೆ. ಯುವಕನ ಕೈ ಮೊದಲಿನಂತೆ ಆಗಿದ್ದು, ಕುಟುಂಬ ಸದಸ್ಯರು ಸಂತಸಗೊಂಡಿದ್ದಾರೆ.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ಗ್ರಾಮಾಂತರ

ತಲಕಾಡು: ಬಂಡಿ ಉತ್ಸವದ ವೇಳೆ ಆಕಸ್ಮಿಕವಾಗಿ ಬಿದ್ದು ಯುವಕ ಸಾವು

February 18, 2026
ಮುಖಪುಟಮೈಸೂರು ನಗರರಾಜಕೀಯ

ಜೆಡಿಎಸ್ ಬೆಳ್ಳಿ ಹಬ್ಬ: ಪಕ್ಷ ಬಲವರ್ಧನೆಗೆ 2 ದಿನಗಳ ಕಾರ್ಯಕ್ರಮ – ಶಾಸಕ ಜಿ.ಡಿ. ಹರೀಶ್ ಗೌಡ

November 19, 2025
ಬೆಂಗಳೂರುಮುಖಪುಟಮೈಸೂರು ನಗರ

ಪಡಿತರ ಕಾರ್ಡ್ ದಾರರಿಗೆ ಗುಡ್ ನ್ಯೂಸ್ ; ‘ಇಂದಿರಾ’ ಆಹಾರ ಕಿಟ್ ವಿತರಣೆ ಯೋಜನೆ ಜಾರಿ ಮಾಡಿದ ರಾಜ್ಯ ಸರ್ಕಾರ

November 19, 2025
ಮುಖಪುಟಮೈಸೂರು ನಗರಸನ್ನಿಧಾನ

ಮೈಸೂರು: ಹೊಸ ವರ್ಷದ ಸಂಭ್ರಮ; ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ

December 26, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?