PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಚಾಮುಂಡೇಶ್ವರಿ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿಕಾಂತ್
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಚಾಮುಂಡೇಶ್ವರಿ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿಕಾಂತ್
ಮುಖಪುಟಮೈಸೂರು ನಗರಸಿನಿಮಾ

ಚಾಮುಂಡೇಶ್ವರಿ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿಕಾಂತ್

Prathinidhi News
Last updated: September 30, 2026 7:18 pm
Prathinidhi News
Published September 30, 2026
Share
SHARE

ಮೈಸೂರು: ಸೂಪರ್ ಸ್ಟಾರ್ ರಜನಿಕಾಂತ್ ಇಂದು ಬೆಳಗ್ಗೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ಮಾಹಿತಿ ನೀಡದೇ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್ ತಾಯಿಯ ದರ್ಶನ ಪಡೆದರು. ಬಳಿಕ ದೇವಾಲಯದ ಒಳಗಿರುವ ವಿನಾಯಕ ಹಾಗೂ ಹನುಮಾನ್ ದೇವರ ದರ್ಶನವನ್ನು ಪಡೆದು ದೇವಾಲಯದಿಂದ ಹೊರ ಬಂದು ಅಭಿಮಾನಿಗಳಿಗೆ ಕೈಬೀಸಿ ಹೊರಟರು. ಈ ದೃಶ್ಯವನ್ನು ಭಕ್ತರು ಮೊಬೈಲ್​ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಬುಧವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ನಾಡ ಅಧಿದೇವತೆಗೆ ಪೂಜೆ ಸಲ್ಲಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯಾರಿಗೂ ನೀಡಿರಲಿಲ್ಲ. ಚಾಮುಂಡಿಬೆಟ್ಟದ ಸಂಪ್ರದಾಯದಂತೆ ಸೂಪರ್ ಸ್ಟಾರ್​ಗೆ ಸಾಂಪ್ರದಾಯಿಕ ಶಾಲು ಹಾಗೂ ಹಾರ ಹಾಕಿ ಗೌರವಿಸಲಾಯಿತು. ಪೂಜೆ ಸಲ್ಲಿಸಿದ ನಂತರ ಎಲ್ಲಾ ಅರ್ಚಕರನ್ನು ಆತ್ಮೀಯವಾಗಿ ಮಾತನಾಡಿಸಿದರು. ಕೆಲವು ಅರ್ಚಕರು ಅವರೊಂದಿಗೆ ಫೋಟೋ ಸಹ ತೆಗೆಸಿಕೊಂಡರು ಎಂದು ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದರು.

ರಜನಿಕಾಂತ್ ಚಾಮುಂಡಿಬೆಟ್ಟಕ್ಕೆ ಆಗಮಿಸಿರುವ ಸುದ್ದಿ ತಿಳಿದ ಅವರ ಅಭಿಮಾನಿಗಳು ಅವರನ್ನು ನೋಡಲು ಬೆಟ್ಟಕ್ಕೆ ಆಗಮಿಸಿದ್ದು, ಕೆಲವು ಕಾಲ ಸಣ್ಣ ನೂಕುನುಗ್ಗಲು ಸಹ ಸಂಭವಿಸಿತ್ತು. ರಜನಿಕಾಂತ್ ಅಭಿಮಾನಿಗಳಿಗೆ ಕೈಬೀಸಿ ತೆರಳಿದರು.

TAGGED:#mysururajinikanth
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ಗ್ರಾಮಾಂತರ

ಬೈಲಕುಪ್ಪೆ: ರೈತನ ಬೆವರು ಕಳ್ಳರ ಪಾಲು; 10 ಲಕ್ಷ ಮೌಲ್ಯದ ಅಡಿಕೆ ದೋಚಿದ ಖದೀಮರು!

January 7, 2026
ಬೆಂಗಳೂರುಮುಖಪುಟರಾಜಕೀಯ

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಚೇತರಿಕೆ ; ಇಂದು ಡಿಸ್ಜಾರ್ಜ್‌ ಸಾಧ್ಯತೆ !

November 20, 2025
ಮುಖಪುಟಮೈಸೂರು ನಗರರಾಜಕೀಯ

ಮೈಸೂರು: ಮಾಧ್ಯಮಗಳಿಂದ ದೂರ ಸರಿದ ಸಿಎಂ ಸಿದ್ದರಾಮಯ್ಯ! ಅಧಿಕಾರ ಹಂಚಿಕೆ ಕುರಿತ ಪ್ರಶ್ನೆಗಳೇ ಕಾರಣ?

November 4, 2025
ಮುಖಪುಟರಾಜಕೀಯ

ಕಾಂಗ್ರೆಸ್ ಕುರ್ಚಿ ಜಗಳ ; “ಕೈ” ನಾಯಕರಿಗೆ ಸಖತ್ತಾಗಿಯೇ ಟಾಂಗ್ ನೀಡಿದ ಬಿ ವೈ ವಿಜಯೇಂದ್ರ ..!

November 4, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?