ಬೆಂಗಳೂರು, ಜನವರಿ 2, 2026:ಕರ್ನಾಟಕದಲ್ಲಿ ಹೊಸ ವರ್ಷ 2026 ಅನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಪಾರ್ಟಿ ಪ್ರಿಯರು ಸಖತ್ ಎಂಜಾಯ್ ಮಾಡಿ ಕಿಕ್ಕೇರಿಸಿಕೊಂಡು ನ್ಯೂ ಇ ಯರ್ ವೆಲ್ ಕಮ್ ಮಾಡಿದ್ದಾರೆ. ಮೂರು ದಿನಗಳಿಂದಲೂ ಎಣ್ಣೆ ಭರ್ಜರಿಯಾಗಿ ಸೇಲ್ ಆಗಿದೆ.
ಈ ಮಧ್ಯೆ ಅಚ್ಚರಿ ವಿಚಾರವೊಂದು ಸದ್ದು ಮಾಡಿದ್ದು, ಮೂರು ವರ್ಷದಲ್ಲಿಯೇ ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಲಿಕ್ಕರ್ ಮಾರಾಟವಾಗಿದೆ. ದಾಖಲೆ ಮಟ್ಟದಲ್ಲಿ ಬಿಯರ್ ಮತ್ತು ಹಾಟ್ ಡ್ರಿಂಕ್ಸ್ ಮಾರಾಟವಾಗಿದೆ.
ಹೌದು, 2025 ರ ಡಿಸೆಂಬರ್ ತಿಂಗಳ ಮೂರು ದಿನದಲ್ಲಿ ರಾಜ್ಯಾದ್ಯಂತ ಬರೋಬ್ಬರಿ 745.84 ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿದೆ. 2024 ರ ಡಿಸೆಂಬರ್ 31 ರಂದು 308 ಕೋಟಿ ರೂ ಮದ್ಯ ಮಾರಾಟ ಮಾಡಲಾಗಿತ್ತು. ಇದರಿಂದ ಅಬಕಾರಿ ಇಲಾಖೆಗೆ 587.51 ಕೋಟಿ ಆದಾಯ ಹರಿದು ಬಂದಿದೆ. 2024 ಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇಕಡ 39.63ರಷ್ಟು ಹೆಚ್ಚಳವಾಗಿದೆ.
2025ರ ಡಿಸೆಂಬರ್ ತಿಂಗಳಿನಲ್ಲಿ ಅಬಕಾರಿ ಆದಾಯ 3,559.08 ಕೋಟಿಗೆ ಏರಿಕೆಯಾಗಿದೆ.2024ರ ಡಿಸೆಂಬರ್ನಲ್ಲಿ 3,104.50 ಕೋಟಿ ಆದಾಯ ಸಂಗ್ರಹವಾಗಿತ್ತು.
ಹೊಸ ವರ್ಷದ ಪಾರ್ಟಿಗಾಗಿ ಮದ್ಯ ಖರೀದಿ ಮಾಡೋರು ಅಬಕಾರಿ ಇಲಾಖೆಗೆ ಒಳ್ಳೆ ಲಾಭವನ್ನೇ ತಂದುಕೊಟ್ಟಿದ್ದಾರೆ.
ಹೊಸ ವರ್ಷಕ್ಕೆ ಸ್ನೇಹಿತರೊಂದಿಗೆ ಪಾರ್ಟಿ ಮಾಡುವವರು ಹೆಚ್ಚಾಗಿ ಮದ್ಯ ಖರೀದಿಸಿದ್ದಾರೆ. ಡಿಸೆಂಬರ್ 30ರಂದು ಅತಿ ಹೆಚ್ಚು ಲಿಕ್ಕರ್ ಮಾರಾಟವಾಗಿದ್ದು, ಜನರು ಮದ್ಯದ ಅಮಲಿನಲ್ಲಿ ಮಿಂದೆದ್ದು ಎಂಜಾಯ್ ಮಾಡಿದ್ದಾರೆ.
ಇನ್ನು ಕಳೆದ 2 ದಿನಗಳಿಂದ ರಾಜ್ಯದಾದ್ಯಂತ ಮದ್ಯ ಅಂಗಡಿಗಳಲ್ಲಿ ಜನದಟ್ಟಣೆ ಕಂಡುಬಂದಿತ್ತು. ಬಿಯರ್ ಮತ್ತು ವಿಸ್ಕಿ, ಬ್ರಾಂದಿ, ರಮ್ ಮುಂತಾದ ಹಾಟ್ ಡ್ರಿಂಕ್ಸ್‌ಗಳ ಬೇಡಿಕೆ ತೀವ್ರವಾಗಿತ್ತು.ಮದ್ಯ ಮಾರಾಟದಿಂದ ಸರ್ಕಾರಕ್ಕೆ ಭಾರೀ ಆದಾಯ ಬಂದಿದೆ. ಇದು ರಾಜ್ಯದ ಆರ್ಥಿಕತೆಗೆ ಬಲ ನೀಡಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
