ಮೈಸೂರು, ಜುಲೈ.23,2026: ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಪಕ್ಷದ ಕಾರ್ಯಕರ್ತರನ್ನು ಬಿಟ್ಟು ಸಮಾಜದಲ್ಲಿ ವಿಷದ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಹಾಗೂ ಇಡೀ ಶಿಕ್ಷಣ ಸಂಸ್ಥೆಗಳನ್ನು ಕಾಂಗ್ರೆಸ್ ಕಚೇರಿಯನ್ನಾಗಿ ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ‘ಭಾರತ್ ಜೋಡೋ’ ನೆಪದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಕಲುಷಿತಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ತೀವ್ರವಾಗಿ ತೊಳೇದೊರೆದರು.
ಕಾಕ್ರೋಚ್ ಹೋರಾಟ ಕಾರ್ಕೋಠಕ ವಿಷವಾಗಿದೆ: ನೀಟ್ (NEET) ಪಶ್ನೆಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಸೂಕ್ತ ಕ್ರಮ ಕೈಗೊಂಡು, ಮರು ಪರೀಕ್ಷೆ ನಡೆಸಿ ಸಮಸ್ಯೆಗೆ ಪರಿಹಾರ ನೀಡಿದೆ. ಆದರೂ ಈ ‘ಕಾಕ್ರೋಚ್’ ಹೋರಾಟಗಾರರ ನಡವಳಿಕೆ ಕಾರ್ಕೋಠಕ ವಿಷವಾಗಿ ಪರಿಣಮಿಸಿದೆ.
ಖಾಕಿ ಮೇಲೆಯೇ ದೌರ್ಜನ್ಯ: ಸ್ವತಃ ಪೊಲೀಸರ ಮೇಲೆಯೇ ದೌರ್ಜನ್ಯ ಎಸಗುವುದನ್ನು ಯಾವುದೇ ಕಾರಣಕ್ಕೂ ‘ಚಳುವಳಿ’ ಎಂದು ಕರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಪವಿತ್ರ ಹೋರಾಟಕ್ಕೆ ಕಾಂಗ್ರೆಸ್ ನಾಯಕರು ಕಪ್ಪು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ ಭೂಗತ ಪ್ರವಾಸ: ಪ್ರತಿಭಟನೆಗಳ ನೆಪದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ರಾಹುಲ್ ಗಾಂಧಿ ಅವರೇ ನೇರ ಹೊಣೆ. ರಾಹುಲ್ ಗಾಂಧಿ ಅವರು ವಿದೇಶಗಳಿಗೆ ಭೂಗತ ಪ್ರವಾಸ ಮಾಡುತ್ತಿದ್ದು, ಅವರ ‘ಟೂರ್ ಪ್ಲಾನ್’ (TP) ಎಲ್ಲಿದೆ? ವಿದೇಶಕ್ಕೆ ಹೋಗಿ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದ್ದಾರೆ.
ಯುಪಿಎ ಆಡಳಿತದ ಪ್ರಶ್ನೆ: ಯುಪಿಎ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ಪ್ರಶ್ನೆಪತ್ರಿಕೆಗಳು ಸೋರಿಕೆಯಾದಾಗ ಕಾಂಗ್ರೆಸ್ ನಾಯಕರು ಯಾಕೆ ರಾಜೀನಾಮೆ ನೀಡಲಿಲ್ಲ? ವಿದ್ಯಾರ್ಥಿಗಳ ಹೆಸರು ಹೇಳಿಕೊಂಡು ವಿದ್ವಂಸಕ ಶಕ್ತಿಗಳಿಂದ ಪ್ರತಿಭಟನೆ ಮಾಡಿಸಲಾಗುತ್ತಿದೆ ಎಂದು ಆಪಾದಿಸಿದರು.
