ನಂಜನಗೂಡು, ನವೆಂಬರ್ 7, 2025 : ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯ ಆತಂಕ ಮುಂದುವರಿದಿದೆ. ಸರಗೂರು ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ರೈತನೋರ್ವನನ್ನು ಇಂದು ಹುಲಿ ಬಲಿ ಪಡೆದಿದ್ದರೆ, ಇತ್ತ ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷವಾಗಿದೆ.
ದನ ಮೇಯಿಸುತ್ತಿದ್ದ ರೈತನ ಸಮೀಪಕ್ಕೆ ಹುಲಿ ಬಂದಿದ್ದು, ಹುಲಿ ಕಂಡೊಡನೆ ರೈತ ಕೂಗಾಡಿದ್ದಾನೆ. ಏಯ್ ಹುಲಿ, ಹುಲಿ, ಹುಲಿ ಎಂದು ಕಿರುಚಾಡಿದ ರೈತ, ಹುಲಿಗೆ ಪ್ರತಿರೋಧ ಒಡ್ಡುವ ರೀತಿ ಹುಲಿಯತ್ತಲೇ ರೈತ ಓಡಿದ್ದಾರೆ. ಈ ವೇಳೆ ಹೊಲದಿಂದ ಹುಲಿ ಓಡಿ ಹೋಗಿದ್ದು, ಹುಲಿ ಓಡಿಹೋದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
