PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಮೈಸೂರಿನ ಸಿದ್ದಾರ್ಥನಗರದಲ್ಲಿ ರೋಚಕ ಕಾರ್ಯಾಚರಣೆ: ಮಂಚದ ಕೆಳಗೆ ಮಲಗಿದ್ದ ಚಿರತೆ ಸುರಕ್ಷಿತವಾಗಿ ಸೆರೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಮೈಸೂರಿನ ಸಿದ್ದಾರ್ಥನಗರದಲ್ಲಿ ರೋಚಕ ಕಾರ್ಯಾಚರಣೆ: ಮಂಚದ ಕೆಳಗೆ ಮಲಗಿದ್ದ ಚಿರತೆ ಸುರಕ್ಷಿತವಾಗಿ ಸೆರೆ
ಮುಖಪುಟಮೈಸೂರು ನಗರ

ಮೈಸೂರಿನ ಸಿದ್ದಾರ್ಥನಗರದಲ್ಲಿ ರೋಚಕ ಕಾರ್ಯಾಚರಣೆ: ಮಂಚದ ಕೆಳಗೆ ಮಲಗಿದ್ದ ಚಿರತೆ ಸುರಕ್ಷಿತವಾಗಿ ಸೆರೆ

Prathinidhi News
Last updated: April 17, 2026 5:54 pm
Prathinidhi News
Published April 17, 2026
Share
SHARE

ಮೈಸೂರು, ಏಪ್ರಿಲ್ 17, 2026: ಸಾಂಸ್ಕೃತಿಕ ನಗರಿಯ ಸಿದ್ದಾರ್ಥನಗರದಲ್ಲಿ ಅಕ್ಷರಶಃ ಎದೆನಡುಗಿಸುವ ಘಟನೆಯೊಂದು ನಡೆದಿದ್ದು, ಮನೆಯೊಳಗೆ ನುಗ್ಗಿ ಮಂಚದ ಕೆಳಗೆ ಆರಾಮವಾಗಿ ನಿದ್ದೆಗೆ ಜಾರಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.

ನಗರದ ನಿವಾಸಿ ಸುರೇಶ್ ಎಂಬುವವರ ಮನೆಗೆ ಬೆಳಿಗ್ಗೆ ಸುಮಾರು 7:30ರ ವೇಳೆಗೆ ಚಿರತೆ ನುಗ್ಗಿರಬಹುದು ಎಂದು ಶಂಕಿಸಲಾಗಿದೆ. ಆ ಸಮಯದಲ್ಲಿ ಮನೆಯ ಮುಖ್ಯ ದ್ವಾರ ಕೇವಲ ಹತ್ತು ನಿಮಿಷಗಳ ಕಾಲ ತೆರೆದಿದ್ದಾಗ ಯಾರಿಗೂ ತಿಳಿಯದಂತೆ ಒಳಬಂದ ಚಿರತೆ, ಬೆಡ್‌ರೂಂನ ಮಂಚದ ಕೆಳಗೆ ಸೇರಿಕೊಂಡಿತ್ತು. ವಿಶೇಷವೆಂದರೆ, ಅದೇ ಮಂಚದ ಮೇಲೆ ಸುರೇಶ್ ಅವರ ವಯಸ್ಸಾದ ತಾಯಿ ಶೈಲಜಾ ಮಲಗಿದ್ದರು. ಸುಮಾರು ಎರಡು ಗಂಟೆಗಳ ಕಾಲ ಚಿರತೆ ಮತ್ತು ವೃದ್ಧೆ ಒಂದೇ ಕೊಠಡಿಯಲ್ಲಿದ್ದರೂ ಯಾವುದೇ ಅನಾಹುತ ಸಂಭವಿಸದಿರುವುದು ಪವಾಡವೇ ಸರಿ.

ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮನೆ ಕೆಲಸದಾಕೆ ಕಸ ಗುಡಿಸಲು ಹೋದಾಗ ಮಂಚದ ಕೆಳಗೆ ಚಿರತೆ ಇರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸುರೇಶ್ ಪತ್ನಿ ಸುಜಾತ, ನಡೆಯಲು ಅಶಕ್ತರಾಗಿದ್ದ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ಕೊಠಡಿಯ ಬಾಗಿಲು ಭದ್ರಪಡಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ, ಎಸಿಎಫ್ ರವೀಂದ್ರ ಹಾಗೂ ಮೃಗಾಲಯದ ಪಶುವೈದ್ಯಾಧಿಕಾರಿ ಡಾ. ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿತು.

ಸುಮಾರು 2.5 ವರ್ಷ ಪ್ರಾಯದ ಈ ಗಂಡು ಚಿರತೆಗೆ ಎರಡು ಬಾರಿ ಅರವಳಿಕೆ ಚುಚ್ಚುಮದ್ದು ನೀಡಿ ಯಶಸ್ವಿಯಾಗಿ ಸೆರೆಹಿಡಿಯಲಾಯಿತು. ಸೆರೆ ಸಿಕ್ಕ ಚಿರತೆಯನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. “ನಾವು ಹಾಲ್‌ನಲ್ಲೇ ಇದ್ದರೂ ಚಿರತೆ ಒಳಬಂದದ್ದು ಗೊತ್ತಾಗಲಿಲ್ಲ, ದೇವರ ದಯೆಯಿಂದ ಪ್ರಾಣಾಪಾಯ ಸಂಭವಿಸಿಲ್ಲ” ಎಂದು ಸುಜಾತ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಸಿದ್ದಾರ್ಥನಗರದ ನಿವಾಸಿಗಳು ಆತಂಕದಿಂದ ಮುಕ್ತರಾಗಿದ್ದಾರೆ.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟ

ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ : ಮೂಢನಂಬಿಕೆಗೆ ಮಹಾರಾಷ್ಟ್ರದಲ್ಲಿ ಕಲಬುರಗಿ ಮೂಲದ ಮಹಿಳೆ ಸಾವು

December 27, 2025
ಚಾಮರಾಜನಗರಮುಖಪುಟಮೈಸೂರು ಗ್ರಾಮಾಂತರ

ತಗ್ಗಲೂರಿನಲ್ಲಿ ಬೋನಿಗೆ ಬಿತ್ತು ಉಪಟಳ ನೀಡುತ್ತಿದ್ದ ಚಿರತೆ : ರೈತರಿಗೆ ನಿಟ್ಟುಸಿರು

November 24, 2025
ಮುಖಪುಟಮೈಸೂರು ನಗರ

ಹನುಮಾನ್ ಚಾಲೀಸ ಪಾರಾಯಣದಲ್ಲಿ ಯುವಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ : ನಟ ವಸಿಷ್ಠ ಸಿಂಹ

February 10, 2026
ಮುಖಪುಟಮೈಸೂರು ನಗರ

ಬೀದಿ ನಾಯಿ ಮರಿಗಳಿಗೆ ವಿದೇಶಿಯರ ಆಸರೆ: ಮೈಸೂರು ಪಾಲಿಕೆಯಿಂದ ವಿನೂತನ ದತ್ತು ಅಭಿಯಾನ

December 16, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?