PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಎಲ್-ನಿನೊ ಭೀತಿ : ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಮಾರ್ಗಸೂಚಿ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಎಲ್-ನಿನೊ ಭೀತಿ : ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಮಾರ್ಗಸೂಚಿ
ಮುಖಪುಟಮೈಸೂರು ನಗರ

ಎಲ್-ನಿನೊ ಭೀತಿ : ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಮಾರ್ಗಸೂಚಿ

Prathinidhi News
Last updated: July 22, 2026 8:04 pm
Prathinidhi News
Published July 22, 2026
Share
SHARE

ಮೈಸೂರು, ಜುಲೈ 22, 2026 : ಪ್ರಸಕ್ತ ವರ್ಷದಲ್ಲಿ ಎಲ್-ನಿನೋ ಪ್ರಭಾವದಿಂದಾಗಿ ಸಾಧಾರಣಕ್ಕಿಂತ ಕಡಿಮೆ ಮಳೆ ಹಾಗೂ ತಾಪಮಾನ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲೆಯ ತೋಟಗಾರಿಕಾ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದ್ದು, ಬೆಳೆ ರಕ್ಷಣೆಗಾಗಿ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ರೈತರಿಗೆ ತುರ್ತು ಮುಂಜಾಗ್ರತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಹವಾಮಾನ ವೈಪರೀತ್ಯದಿಂದಾಗಿ ತೋಟಗಾರಿಕಾ ಬೆಳೆಗಳಿಗೆ ಹಲವು ರೀತಿಯ ಹಾನಿಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ. ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿಯಲಿದೆ. ಇದರಿಂದ ಗಿಡಗಳಿಗೆ ಕ್ಯಾಲ್ಸಿಯಂ, ಬೋರಾನ್, ಜಿಂಕ್ ಮತ್ತು ಪೊಟ್ಯಾಷಿಯಂ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗದೆ ಹಣ್ಣುಗಳಲ್ಲಿ ಬಿರುಕು ಹಾಗೂ ಕೊಳೆ ರೋಗ ಕಾಣಿಸಿಕೊಳ್ಳುತ್ತದೆ. ಬಿಸಿ ಹಾಗೂ ಒಣ ಹವಾಮಾನದಿಂದಾಗಿ ಕೆಂಪು ಜೇಡ, ಥ್ರಿಪ್ಸ್, ಬಿಳಿ ನೊಣ, ಗಿಡ ಹೇನು ಮತ್ತು ಮೀಲಿಬಗ್‌ಗಳಂತಹ ರಸ ಹೀರುವ ಕೀಟಗಳ ಬಾಧೆ ಹೆಚ್ಚಾಗಲಿದೆ.

  • ಮಾವು: ಹೂ ಮತ್ತು ಹಣ್ಣುಗಳು ಉದುರುವುದು, ಗಾತ್ರ-ಗುಣಮಟ್ಟ ಕುಸಿಯುವುದು ಹಾಗೂ ಬೂದಿ ರೋಗದ ತೀವ್ರತೆ ಹೆಚ್ಚಾಗುವುದು.
  • ಬಾಳೆ: ಎಲೆಗಳು ಸುಡುವುದು, ಬೆಳವಣಿಗೆ ಕುಂಠಿತಗೊಂಡು ಗೊಂಚಲ ತೂಕ ಕಡಿಮೆಯಾಗುವುದು.
  • ತೆಂಗು: ಫಸಲು ಧಾರಣೆ ಕಡಿಮೆಯಾಗಿ, ಸುಸಿರೋಗ ಮತ್ತು ಕಪು ತಲೆ ಹುಳುವಿನ ಬಾಧೆ ಎದುರಾಗುವುದು.

ಬೆಳೆ ಹಾನಿ ತಡೆಯಲು ಹಾಗೂ ನೀರಿನ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ:

  1. ಮಣ್ಣು, ಮಳೆ ನೀರು ಸಂರಕ್ಷಣೆ: ತೋಟದ ಫಲವತ್ತತೆ ಹೆಚ್ಚಿಸಲು ಸಣಬು, ಡಯಾಂಚ, ಅಲಸಂದೆ ಅಥವಾ ಅವರೆಯಂತಹ ಹಸಿರೆಲೆ ಗೊಬ್ಬರದ ಬೆಳೆಗಳನ್ನು ವರ್ಷದಲ್ಲಿ ಎರಡು ಬಾರಿ ಬೆಳೆಯಬೇಕು. ತೆಂಗಿನ ತೋಟಗಳಲ್ಲಿ ಬಿದ್ದ ಗರಿಗಳು ಹಾಗೂ ಸಿಪ್ಪೆಗಳನ್ನು ಮರದ ಬುಡದ ಸುತ್ತಲೂ ಹಾಕಿ ಮಲ್ಚಿಂಗ್ (ಹೊದಿಕೆ) ಮಾಡಬೇಕು. ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಲು ಬೇಸಿಗೆ ಉಳುಮೆ, ಗಿ-ಆಕೃತಿಯ ಕಾಲುವೆಗಳು, ಅರ್ಧವೃತ್ತಾಕಾರದ ಬದುಗಳು ಹಾಗೂ ಇಂಗು ಗುಂಡಿಗಳನ್ನು ನಿರ್ಮಿಸಬೇಕು.
  2. ನೀರಾವರಿ ಹಾಗೂ ಬೆಳೆ ನಿರ್ವಹಣೆ: ಹನಿ ನೀರಾವರಿ ಪದ್ಧತಿಯನ್ನು ಬೆಳಗ್ಗೆ ಅಥವಾ ಸಂಜೆಯ ವೇಳೆಯಲ್ಲಿ ಬಳಸಬೇಕು. ನೀರಿನ ಅಭಾವವಿದ್ದಾಗ ಪರ್ಯಾಯ ಸಾಲು ನೀರಾವರಿ ಪದ್ಧತಿ ಅನುಸರಿಸುವುದು ಸೂಕ್ತ. ಗಿಡಗಳ ಪಾತಿಗಳಲ್ಲಿ 10-15 ಅಡಿ ವ್ಯಾಸದಲ್ಲಿ ಸಾವಯವ ಹೊದಿಕೆ ಅಳವಡಿಸಬೇಕು. ನೀರು ಆವಿಯಾಗುವುದನ್ನು ತಡೆಯಲು ಕಾಯೋಲಿನ್ ನಂತಹ ವಸ್ತುಗಳ ಬಳಕೆ, ಬೆಳೆಗಳ ಸವರವಿಕೆ ಹಾಗೂ ಬರ ಸಹಿಷ್ಣು ತಳಿಗಳ ಆಯ್ಕೆಗೆ ಆದ್ಯತೆ ನೀಡಬೇಕು. ವಿದ್ಯುತ್ ವ್ಯತ್ಯಯದ ಸಮಸ್ಯೆಗೆ ಪರ್ಯಾಯವಾಗಿ ಸೋಲಾರ್ ಪಂಪ್‌ಸೆಟ್‌ಗಳನ್ನು ಬಳಸುವುದು ಉತ್ತಮ.

    ನೆರವಿಗಾಗಿ ಸಂಪರ್ಕಿಸಿ
    ಬೆಳೆ ರಕ್ಷಣೆ ಹಾಗೂ ತಾಂತ್ರಿಕ ಸಲಹೆಗಳಿಗಾಗಿ ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಮೈಸೂರು (ಜಂಟಿ ನಿರ್ದೇಶಕರ ಕಚೇರಿ): 0821-2422255, ಮೈಸೂರು (ಹಿರಿಯ ಸಹಾಯಕ ನಿರ್ದೇಶಕರ ಕಚೇರಿ) 0821-2430450, ಹೆಚ್.ಡಿ.ಕೋಟೆ: 08228-297261, ಹುಣಸೂರು 08222-252447, ಕೆ.ಆರ್.ನಗರ 08223-262791, ಟಿ.ನರಸೀಪುರ 08227-297068ನ್ನು ಸಂಪರ್ಕಿಸಬಹುದು.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಬೆಂಗಳೂರುಮುಖಪುಟಸಿನಿಮಾ

ಜನವರಿ 29ರಿಂದ ಫೆಬ್ರವರಿ 06ರ ವರೆಗೆ 17 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

December 23, 2025
ಮುಖಪುಟಮೈಸೂರು ನಗರರಾಜಕೀಯ

ಪೂರ್ಣ 5 ವರ್ಷಕ್ಕೆ ಸಿದ್ದರಾಮಯ್ಯ ಅವ್ರೇ ಮುಖ್ಯಮಂತ್ರಿ ಆಗಿರ್ಲಿ.., ರಸ್ತೆ ತಡೆ ನಡೆಸಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರಿಂದ ಪ್ರತಿಭಟನೆ !

November 29, 2025
ಮುಖಪುಟಮೈಸೂರು ನಗರ

ಮೈಸೂರು: ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ; ಮಾರುಕಟ್ಟೆಗಳಲ್ಲಿ ಜನಸಾಗರ, ಹಬ್ಬಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ

January 14, 2026
ನಂಜನಗೂಡುಮುಖಪುಟ

ನಂಜನಗೂಡು: ಸ್ಮಶಾನ ಜಾಗ ಸರ್ವೇ ವೇಳೆ ಮಾಜಿ ತಾ.ಪಂ. ಸದಸ್ಯನಿಂದ ರೌಡಿಸಂ; ಅಧಿಕಾರಿಗಳ ಮುಂದೆಯೇ ಹಲ್ಲೆ

November 22, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?