ನವದೆಹಲಿ , ನವೆಂಬರ್ 6, 2025 : ಆಧಾರ್ ಹಾಗೂ ಪ್ಯಾನ್ ಲಿಂಕ್ ಗೆ ಡಿಸೆಂಬರ್ 31ರ ಡೆಡ್ ಲೈನ್ ನಿಗದಿ ಆಗಿದ್ದು, ಕಾಲಾವಕಾಶದೊಳಗೆ ಲಿಂಕ್ ಮಾಡಿಕೊಳ್ಳದಿದ್ದರೆ ಪ್ಯಾನ್ ಕಾರ್ಡ್ ಕ್ಯಾನ್ಸಲ್ ಆಗಲಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾಹಿತಿ ನೀಡಿದೆ. ಅಲ್ಲದೆ ಆಧಾರ್ ಜತೆ ಲಿಂಕ್ ಆಗದ ಪ್ಯಾನ್ ಗಳು ಜನವರಿ 1 ರಿಂದ ಅನೂರ್ಜಿತಗೊಳ್ಳಲಿದೆ ಎನ್ನಲಾಗಿದೆ.
ಡಿಸೆಂಬರ್ 31ರ ನಂತರ ಲಿಂಕ್ ಮಾಡಿದರೆ ಒಂದು ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಪರ್ಮನೆಂಟ್ ಅಕೌಂಟ್ ನಂಬರ್ ಎಂಬುದು ಪ್ರತಿ ವ್ಯಕ್ತಿಗೂ ಆದಾಯ ತೆರಿಗೆ ಇಲಾಖೆ ನೀಡುವ ಗುರುತಿನ ಸಂಖ್ಯೆಯಾಗಿದ್ದು, ಒಮ್ಮೆ ಒಬ್ಬ ವ್ಯಕ್ತಿಗೆ ಇದನ್ನು ನೀಡಿದರೆ ಯಾವುದೇ ಕಾರಣಕ್ಕೂ ಬದಲಾಗಲ್ಲ.
ದೇಶದಲ್ಲಿ ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಐಟಿ ರಿಟರ್ನ್ಸ್ ಸಲ್ಲಿಸಲು ಸಹ ಪ್ಯಾನ್ ಪ್ರಮುಖ ಗುರುತಿನ ಚೀಟಿ ಆಗಿದ್ದು, ನಿಷ್ಕ್ರಿಯಗೊಂಡನಿಂದ ಯಾವುದೇ ಆರ್ಥಿಕ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ. ಕ್ಯಾನ್ಸಲ್ ಆದ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ. ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ನಡೆಸಲಾಗುವುದಿಲ್ಲ.ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಬಂದಿದ್ದು, ಇದೀಗ ಡಿಸೆಂಬರ್ 31ಕ್ಕೆ ಫೈನಲ್ ಡೇಟ್ ನಿಗದಿ ಪಡಿಸಿದೆ.
