ಬೆಂಗಳೂರು, ನವೆಂಬರ್ 8, 2025 : ವೋಟ್ ಚೋರಿ ಅಭಿಯಾನದ ಮೂಲಕ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ದೇಶದೆಲ್ಲೆಡೆ ಸಮರ ಸಾರಿದ್ದಾರೆ. ಈ ನಡುವೆ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಸಂವಿಧಾನದಲ್ಲಿ ಆಯೋಗವನ್ನು ಸ್ವತಂತ್ರ ಸಂಸ್ಥೆಯಾಗಿ ಮಾಡಲಾಗಿದೆ ಚುನಾವಣಾ ಆಯೋಗವು ಯಾರ ಪ್ರಭಾವಕ್ಕೂ ಒಳಗಾಗಬಾರದು. ಬಿಜೆಪಿ ಸೋಲಿನ ಸರದಾರ ಅಷ್ಟೇ ಅಲ್ಲ ಸುಳ್ಳೇ ಅವರ ಮನೆದೇವರ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಮತಗಳ್ಳತನ ಮಾಡುವಲ್ಲೂ ನಿಪುಣರು ಅಂತ ಬಿಜೆಪಿಯವರು ಸಾಬೀತು ಮಾಡಿದ್ದಾರೆ ಮತಗಳ್ಳತನ ಮಾಡಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಲೋಕಸಭೆ ವಿಧಾನಸಭೆ ಚುನಾವಣೆಯಲ್ಲೂ ಮತಗಳತನ ಮಾಡಿದ್ದಾರೆ ದೇಶದ ಹಲವು ರಾಜ್ಯಗಳಲ್ಲಿ ಮತಗಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು.
ಚುನಾವಣಾ ಆಯೋಗ ಕೆಲ ಸಂದರ್ಭದಲ್ಲಿ ಬೊಂಬೆಯಂತೆ ವರ್ತಿಸಿದೆ. ಅನ್ಯ ಮಾರ್ಗಗಳ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಈ ಬಗ್ಗೆ ಸಮಗ್ರ ಹಾಗೂ ಪಾರದರ್ಶಕ ತನಿಖೆ ಆಗ್ಬೇಕು ಎಂದು ಹೇಳಿದರು.
