ಮೈಸೂರು, ಜುಲೈ 22, 2026 : ಮೈಸೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರವೂ ಮುಂದುವರಿದಿದ್ದು, ವಲಯ 7 ಹಾಗೂ 2ರ ವ್ಯಾಪ್ತಿಯಲ್ಲಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಯಿತು.
ನರಸಿಂಹರಾಜ ಕ್ಷೇತ್ರದ ವಲಯ ಕಚೇರಿ-7 ಹುಡ್ಕೋ ಮುಖ್ಯ ರಸ್ತೆಯಿಂದ ಬಿ.ಎಮ್‌ಶ್ರೀ ನಗರದ ಹಿಂದಿನ ಜೋಡಿ ತೆಂಗಿನ ಮರದ ರಸ್ತೆಯವರೆಗಿನ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡು ನಿರ್ಮಿಸಿದ್ದ ಅಂಗಡಿಗಳು, ಶಾಪ್‌ಗಳು, ನಾಮಫಲಕಗಳು, ಕಾಂಪೌAಡ್ ಸೇರಿದಂತೆ ವ್ಯಾಪಾರಿಗಳನ್ನು ತೆರವುಗೊಳಿಸಲಾಯಿತು.
ವಲಯ ಆಯುಕ್ತೆ ರತ್ನಾ, ಅಭಿವೃದ್ಧಿ ಅಧಿಕಾರಿ ರುಕ್ಮಾಂಗದ, ಇಂಜಿನಿಯರ್‌ಗಳಾದ ರಾಜೇಶ್, ಪ್ರಿಯಾಂಕ, ಆರೋಗ್ಯ ನಿರೀಕ್ಷಕಿ ನಮ್ರತ, ಪಾಲಿಕೆಯ ಅಭಯ ಪಡೆಯ ಸಿಬ್ಬಂದಿ, ಗ್ಯಾಂಗ್ ಮ್ಯಾನ್ ತಂಡ ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಅಂತೆಯೇ ವಲಯ ಕಚೇರಿ-2ರ ವ್ಯಾಪ್ತಿಯಲ್ಲಿ ಬರುವ ನ್ಯೂ ಕಾಂತರಾಜು ಅರಸ್ ರಸ್ತೆ, ನಂಜಿಮಳಿಗೆ ರಸ್ತೆ, ಮಾಧವರಾವ್ ರಸ್ತೆ ಹಾಗೂ ಗೋಪಾಲಸ್ವಾಮಿ ರಸ್ತೆಗಳ ಪಾದಚಾರಿ ಮಾರ್ಗದಲ್ಲಿದ್ದ ಅಕ್ರಮ ಅಂಗಡಿಗಳು ಮತ್ತು ಅಡೆತಡೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಅಭಿವೃದ್ಧಿ ಅಧಿಕಾರಿ ಚೇತನ್ ಬಾಬು, ಆರೋಗ್ಯ ನಿರೀಕ್ಷಕ ಜಯರಾಮ್, ಅಭಯ ತಂಡ, ಗ್ಯಾಂಗ್ ಮ್ಯಾನ್‌ಗಳು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಾಚರಣೆ ನಡೆಯಿತು.
