ಬೆಂಗಳೂರು, ಜನವರಿ 9, 2026 : ಕನ್ನಡದ ಸೂಪರ್ ಹಿಟ್ ಸಿನಿಮಾ ಕಾಂತಾರ ಸಿನಿಮಾ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆದಿದ್ದು, ಆಸ್ಕರ್ ಪ್ರಶಸ್ತಿಯ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕಾಂತಾರ ಚಾಪ್ಟರ್ ಒನ್ ಚಿತ್ರ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದ್ದು, ಅತ್ಯುತ್ತಮ ಚಿತ್ರ ವಿಭಾಗದ ಸ್ಪರ್ಧಾ ಕಣಕ್ಕೂ ಪ್ರವೇಶ ಪಡೆದಿದೆ.

ಕಾಂತಾರ ಚಾಪ್ಟರ್ ಒನ್ ಚಿತ್ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಸ್ಥಾನ ಪಡೆದಿದೆ ಎಂದು ಹೊಂಬಾಳೆ ಸಂಸ್ಥೆ ಹೇಳಿಕೊಂಡಿದೆ. ಹೊಂಬಾಳೆ ಸೋಷಿಯಲ್ ಮೀಡಿಯಾದ ತಮ್ಮ ಅಧಿಕೃತ ಪೇಜ್ ಅಲ್ಲಿಯೇ ಇದನ್ನ ಪೋಸ್ಟರ್ ಸಮೇತ ಹೇಳಿಕೊಂಡಿದೆ.
98ನೇ ಅಕಾಡೆಮಿ ಪ್ರಶಸ್ತಿಗಳ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಎರಡು ಭಾರತೀಯ ಚಿತ್ರಗಳಾದ ಕಾಂತಾರಾ: ಎ ಲೆಜೆಂಡ್ – ಚಾಪ್ಟರ್ 1 ಮತ್ತು ತನ್ವಿ ದಿ ಗ್ರೇಟ್, ಅತ್ಯುತ್ತಮ ಚಿತ್ರಕ್ಕಾಗಿ ಅಧಿಕೃತ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಎರಡೂ ಭಾರತೀಯ ಚಿತ್ರಗಳು ಅಕಾಡೆಮಿಯ ಹೆಚ್ಚುವರಿ ಅರ್ಹತಾ ನಿಯಮಗಳನ್ನು ಪೂರೈಸಿವೆ ಹೀಗಾಗಿಯೇ ಎಂಟ್ರಿ ಸುತ್ತಿಗೆ ಅರ್ಹತೆ ಪಡೆದಿವೆ.
ಎಲ್ಲಾ ವಿಭಾಗಗಳಲ್ಲಿ ಈ ವರ್ಷ ಒಟ್ಟು 317 ಚಲನಚಿತ್ರಗಳು ಅರ್ಹವಾಗಿವೆ. 98 ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅಧಿಕೃತ ನಾಮನಿರ್ದೇಶನಗಳನ್ನು ಜನವರಿ 22 ರಂದು ಘೋಷಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
