ಹೆಚ್ ಡಿ ಕೋಟೆ , ನವೆಂಬರ್ 13, 2025 : ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಹುಲಿ ದಾಳಿಗೆ ಊರ ದೇವರ ಬಸವ (ಗೂಳಿ) ಬಲಿಯಾಗಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಕಾರಾಪುರ ಸಮೀಪದ ಎನ್ ಬೆಳ್ತೂರು ಗ್ರಾಮದ ಬಳಿ ಜರುಗಿದೆ.

ಎನ್ ಬೆಳ್ತೂರು ಮಗ್ಗೆ ಮಳಲಿ ದೇವಸ್ಥಾನದಲ್ಲಿ ಪೂಜಿಸುವ ಊರ ಬಸವನನ್ನು ಕೊಂದು ಅರ್ಧಂಬರ್ಧ ಹುಲಿಯು ತಿಂದು ಹಾಕಿದ್ದು, ನಿರಂತರ ಹುಲಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇನ್ನು ಘಟನೆ ನಡೆದ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹುಲಿ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳನ್ನು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
