PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಸಿಎಂ ರಾಜಕೀಯ ಬಿಟ್ಟು ಆರ್ಥಿಕ ಪರಿಸ್ಥಿತಿ ಸರಿಪಡಿಸಲಿ: ಮಾಜಿ ಸಚಿವ ಸಾ.ರಾ. ಮಹೇಶ್​
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಸಿಎಂ ರಾಜಕೀಯ ಬಿಟ್ಟು ಆರ್ಥಿಕ ಪರಿಸ್ಥಿತಿ ಸರಿಪಡಿಸಲಿ: ಮಾಜಿ ಸಚಿವ ಸಾ.ರಾ. ಮಹೇಶ್​
ಮುಖಪುಟಮೈಸೂರು ನಗರ

ಸಿಎಂ ರಾಜಕೀಯ ಬಿಟ್ಟು ಆರ್ಥಿಕ ಪರಿಸ್ಥಿತಿ ಸರಿಪಡಿಸಲಿ: ಮಾಜಿ ಸಚಿವ ಸಾ.ರಾ. ಮಹೇಶ್​

Prathinidhi News
Last updated: October 1, 2026 7:04 pm
Prathinidhi News
Published October 1, 2026
Share
SHARE

ಮೈಸೂರು: “ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮೊದಲು ಅದನ್ನು ಸರಿಪಡಿಸಿ ರೈತರ ಹಾಗೂ ಜನರ ಹಿತಾಸಕ್ತಿ ಕಾಪಾಡುವಂತೆ” ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ಗೆ ಮಾಜಿ ಸಚಿವ ಸಾ.ರಾ. ಮಹೇಶ್​​ ತಿಳಿ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಗುರುವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಾ ರಾ ಮಹೇಶ್, “ರಾಜಕೀಯದಲ್ಲಿ ಪ್ರತಿಪಕ್ಷಗಳು ಆರೋಪ ಮಾಡುವುದು ಸಹಜ. ಅದಕ್ಕೆ ಸರ್ಕಾರ ಅಂಕಿ ಅಂಶಗಳ ಮೂಲಕ ಸ್ಪಷ್ಟನೆ ನೀಡಬೇಕೇ ಹೊರತು, ರಾಜಕೀಯ ಕೆಸರೆರಚಾಟ ಮಾಡಬಾರದು. ಕುಮಾರಸ್ವಾಮಿಯವರು ಅಂಕಿ ಅಂಶಗಳ ಸಮೇತ ಡಿ.ಕೆ. ಶಿವಕುಮಾರ್​ ಅವರ ಮೇಲೆ ಆರೋಪ ಮಾಡಿದ್ದಾರೆ. ಅದಕ್ಕೆ ಡಿಕೆಶಿ ಅವರು ಉತ್ತರ ನೀಡುತ್ತಾರೆ. ಅದನ್ನು ಬಿಟ್ಟು ಕುಮಾರಸ್ವಾಮಿಯವರ ವಿರುದ್ಧ ಹೇಳಿಕೆ ನೀಡಲು ನೀವೇನು ಕಾಂಗ್ರೆಸ್ ವಕ್ತಾರರ ಅಥವಾ ಕಾಂಗ್ರೆಸ್​ನಲ್ಲಿ ಇವರಿಬ್ಬರನ್ನು ಬಿಟ್ಟು ಬೇರೆ ನಾಯಕರೇ ಇಲ್ಲವಾ” ಎಂದು ಸಚಿವರುಗಳಾದ ಚಲುವರಾಯಸ್ವಾಮಿ ಹಾಗೂ ಬಾಲಕೃಷ್ಣರನ್ನು ಉಲ್ಲೇಖಿಸಿ ಮಾತನಾಡಿದರು.

“ಈ ಮೊದಲು ಇವರಿಬ್ಬರೂ ನಮ್ಮ ಜೆಡಿಎಸ್ ಪಕ್ಷದಲ್ಲೇ ಇದ್ದವರು. ಈಗ ಅಲ್ಲಿ ಹೋಗಿ ಮಂತ್ರಿಗಳಾದ ಮೇಲೆ ಕುಮಾರಸ್ವಾಮಿ ಹಾಗೂ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಾರೆ. ಮಾತನಾಡುವ ಮೊದಲು ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಟೀಕೆಗಳು ಆರೋಗ್ಯಕರವಾಗಿರಬೇಕೇ ಹೊರತು, ವ್ಯಕ್ತಿಗತವಾಗಿರಬಾರದು. ಇಬ್ಬರಿಗೂ ಒಳ್ಳೆಯ ಖಾತೆ ಸಿಕ್ಕಿದೆ, ಅದರಿಂದ ರಾಜ್ಯದ ಜನರಿಗೆ ಹಾಗೂ ರೈತರಿಗೆ ಒಳ್ಳೆಯ ಕೆಲಸ ಮಾಡುವುದರ ಕಡೆ ಗಮನಹರಿಸಿ” ಎಂದು ಚಲುವರಾಯಸ್ವಾಮಿ ಹಾಗೂ ಬಾಲಕೃಷ್ಣರನ್ನು ಮಾಜಿ ಸಚಿವ ಸಾ ರಾ ಮಹೇಶ್ ತರಾಟೆಗೆ ತೆಗೆದುಕೊಂಡರು.

ಹೌದು.. ಬಿಡದಿ ಟೌನ್ ಶಿಪ್ ಯೋಜನೆ ಕುಮಾರಸ್ವಾಮಿಯವರದ್ದೇ!: ಕುಮಾರಸ್ವಾಮಿಯವರು ಬಿಡದಿಯಲ್ಲಿ ಟೌನ್​​ ಶಿಪ್ ಮಾಡಬೇಕೆಂದು ಹೊರಟಿದ್ದು ನಿಜ. ಆದರೆ ಆಗಿನ ಸಂದರ್ಭದಲ್ಲಿ ರೈತರ ಭೂಮಿ ಫಲವತ್ತಾಗಿರಲಿಲ್ಲ, ಒಂದು ರೀತಿ ಬಂಜರಾಗಿತ್ತು. ಆಗ ಅಲ್ಲಿ ಟೌನ್​ಶಿಪ್ ಮಾಡಲು ನಿರ್ಧರಿಸಿದ್ದರು. ಕಾಲಕ್ರಮೇಣ ಅಲ್ಲಿನ ಭೂಮಿ ಸಮೃದ್ಧವಾಗಿ ರೈತರು ಬೆಳೆ ಬೆಳೆಯಲು ಪ್ರಾರಂಭಿಸಿದ ಮೇಲೆ ಕುಮಾರಸ್ವಾಮಿಯವರು ಬಿಡದಿ ಟೌನ್​ಶಿಪ್ ಯೋಜನೆ ಕೈಬಿಟ್ಟರು” ಎಂದು ಸಾ ರಾ ಮಹೇಶ್ ಸಮರ್ಥಿಸಿಕೊಂಡರು.

- ಜಾಹೀರಾತು -
TAGGED:#mysuruSARAMAHEHS
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಕ್ರೈಂ ಸುದ್ದಿಗಳುನಂಜನಗೂಡುಮುಖಪುಟ

ಪತಿ ಅನುಮಾನಾಸ್ಪದ ಸಾವು: ಅಕ್ರಮ ಸಂಬಂಧಕ್ಕೆ ವಿರೋಧಿಸಿದ ಕಾರಣಕ್ಕೆ ಪತ್ನಿಯೇ ಕೊಲೆಗೈದಿರುವ ಶಂಕೆ

November 10, 2025
ಮುಖಪುಟಮೈಸೂರು ನಗರ

ಮನೆಯಲ್ಲಿ ಅಮ್ಮ ಇರಲಿಲ್ಲ, ಉದ್ದೇಶಪೂರ್ವಕವಾಗಿ ನಾನು ತಡವಾಗಿ ಬಂದಿಲ್ಲ : ಸಚಿವ ಯತೀಂದ್ರ

September 28, 2026
ನವದೆಹಲಿಬೆಂಗಳೂರುಮುಖಪುಟ

ಆಧಾರ್ ಹಾಗೂ ಪ್ಯಾನ್ ಲಿಂಕ್ ಗೆ ಡಿಸೆಂಬರ್ 31 ಡೆಡ್ ಲೈನ್ : ಲಿಂಕ್ ಆಗದ ಪ್ಯಾನ್ ಗಳು ಜನವರಿ 1 ರಿಂದ ಅನೂರ್ಜಿತ

November 6, 2025
ಮಂಡ್ಯಮುಖಪುಟಸಿನಿಮಾ

ʼತಿಥಿʼ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ.!

November 12, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?