ಮೈಸೂರು : ಗಣೇಶ ಆಯೋಜಕರಿಗೆ ಟಿ.ನರಸೀಪುರ ಇನ್ಸಪೆಕ್ಟರ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ನಾಯಕರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇದೀಗ ಮೈಸೂರು ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯನವರು ಘಟನೆ ನಡೆದು 5 ದಿನಗಳ ಬಳಿಕ ಮೌನ ಮುರಿದಿದ್ದು, ಪಾಪ ಇನ್ಸ್ಪೆಕ್ಟರ್ ಧನಂಜಯ ಯಾವುದೇ ತಪ್ಪು ಮಾಡಿಲ್ಲ ಎಂದು ಟಿ.ನರಸೀಪುರ ಪಿಐ ಧನಂಜಯ ನಡೆ ಸಮರ್ಥಿಸಿಕೊಂಡಿದ್ದಾರೆ. ಟಿ.ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ಸಂಬಂಧ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಅವರಿಗೆ ಬೇಕಾದಂತಹ ರಸ್ತೆಯಲ್ಲಿ ಹೋಗಲು ಬಿಡಲು ಆಗುತ್ತಾ? ಸ್ಥಳೀಯ ಆಡಳಿತದ ಅನುಮತಿ ಪಡೆದು ಮೆರವಣಿಗೆ ಮಾಡಬಹುದು. ಅನುಮತಿ ಪಡೆಯದೆ ಏನಾದ್ರೂ ಸಮಸ್ಯೆಯಾದರೆ ಯಾರು ಹೊಣೆ? ಏನಾದರೂ ಹೆಚ್ಚುಕಡಿಮೆಯಾದರೆ? ಅದನ್ನೇ ಪಿಐ ಧನಂಜಯ ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಟಿ.ನರಸೀಪುರ ಪಿಐ ಧನಂಜಯ ಹೇಳಿರುವುದು ಸರಿಯಾಗೇ ಇದೆ ಎಂದರು