PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ದಸರಾಗೆ ಡ್ರೋನ್‌ಗಳ ಝಲಕ್: 3,500ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ನವಿಲಿನ ಆಕೃತಿ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಜಿಲ್ಲೆ > ದಸರಾಗೆ ಡ್ರೋನ್‌ಗಳ ಝಲಕ್: 3,500ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ನವಿಲಿನ ಆಕೃತಿ
ಜಿಲ್ಲೆಮುಖಪುಟಮೈಸೂರು ನಗರ

ದಸರಾಗೆ ಡ್ರೋನ್‌ಗಳ ಝಲಕ್: 3,500ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ನವಿಲಿನ ಆಕೃತಿ

Prathinidhi News
Last updated: October 8, 2026 6:54 pm
Prathinidhi News
Published October 8, 2026
Share
SHARE

ಮೈಸೂರು, ಅಕ್ಟೋಬರ್ 8: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಲು ಈ ಬಾರಿ 3,500ಕ್ಕೂ ಹೆಚ್ಚು ಡ್ರೋನ್‌ಗಳ ಭರ್ಜರಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಆಕಾಶವನ್ನೇ ಕ್ಯಾನ್ವಾಸ್ ಮಾಡಿಕೊಂಡು ಎಲ್‌ಇಡಿ ದೀಪಗಳನ್ನು ಅಳವಡಿಸಿರುವ ಡ್ರೋನ್‌ಗಳ ಮೂಲಕ ಬೃಹತ್ ನವಿಲಿನ ಆಕೃತಿ ಮೂಡಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ಈ ಡ್ರೋನ್‌ ಶೋ ಆಯೋಜಿಸಲು ಸಿದ್ಧತೆ ನಡೆಸಿದೆ. ಸುಮಾರು 15 ನಿಮಿಷಗಳ ಕಾಲ ನಡೆಯಲಿರುವ ಪ್ರದರ್ಶನದಲ್ಲಿ 3,500ಕ್ಕೂ ಹೆಚ್ಚು ಡ್ರೋನ್‌ಗಳು ಹಾರಾಟ ನಡೆಸಲಿವೆ.

Contents
2023ರಲ್ಲೂ ಗಿನ್ನೆಸ್ ದಾಖಲೆ ಬರೆದಿದ್ದ ಡ್ರೋನ್ ಶೋಅ.17ರಿಂದ ನಾಲ್ಕು ದಿನ ಡ್ರೋನ್‌ ಶೋ

ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಬೃಹತ್ ಆಕೃತಿಯನ್ನು ಡ್ರೋನ್‌ಗಳ ಮೂಲಕ ಆಕಾಶದಲ್ಲಿ ಮೂಡಿಸುವ ಯೋಜನೆ ರೂಪಿಸಲಾಗಿದೆ. ಈ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರುವ ಪ್ರಯತ್ನ ನಡೆಯಲಿದೆ. ಯೋಜನೆ ಬಗ್ಗೆ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

2023ರಲ್ಲೂ ಗಿನ್ನೆಸ್ ದಾಖಲೆ ಬರೆದಿದ್ದ ಡ್ರೋನ್ ಶೋ

2023ರಲ್ಲಿ 2,983 ಡ್ರೋನ್‌ಗಳನ್ನು ಬಳಸಿ ಆಕಾಶದಲ್ಲಿ ಬೃಹತ್ ಹುಲಿಯ ಆಕೃತಿ ಮೂಡಿಸಲಾಗಿತ್ತು. ಇದು ಮಲ್ಟಿರೋಟರ್‌/ಡ್ರೋನ್‌ಗಳ ಮೂಲಕ ನಿರ್ಮಿಸಲಾದ ಅತಿ ದೊಡ್ಡ ಸಸ್ತನಿ ಆಕಾಶ ಪ್ರದರ್ಶನ ಎಂಬ ಗಿನ್ನೆಸ್ ದಾಖಲೆಗೆ ಪಾತ್ರವಾಗಿತ್ತು. 2024ರಲ್ಲಿ ಬನ್ನಿಮಂಟಪದ ಟಾರ್ಚ್‌ಲೈಟ್ ಪರೇಡ್ ಮೈದಾನದಲ್ಲಿ 1,500 ಡ್ರೋನ್‌ಗಳ ಮೂಲಕ ಡ್ರೋನ್‌ ಶೋ ಆರಂಭಿಸಲಾಗಿತ್ತು. ಬಳಿಕ ಈ ಪ್ರದರ್ಶನ ಜನಪ್ರಿಯತೆ ಗಳಿಸಿದೆ.

ಈ ಬಾರಿಯ ಡ್ರೋನ್‌ ಶೋಗೆ ಸುಮಾರು ₹5 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಡ್ರೋನ್‌ಗಳ ಖರೀದಿ, ತಾಂತ್ರಿಕ ವ್ಯವಸ್ಥೆ, ಸಾಫ್ಟ್‌ವೇರ್, ನಿಯಂತ್ರಣ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಹಾಗೂ ತಾಂತ್ರಿಕ ತಜ್ಞರ ವೆಚ್ಚ ಇದರಲ್ಲಿ ಸೇರಿದೆ. ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಖಾಸಗಿ ಪ್ರಾಯೋಜಕತ್ವ ಪಡೆಯುವ ಚಿಂತನೆಯೂ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

- ಜಾಹೀರಾತು -

ಅ.17ರಿಂದ ನಾಲ್ಕು ದಿನ ಡ್ರೋನ್‌ ಶೋ

ದೆಹಲಿ ಮೂಲದ ಬೋಟ್​​ಲ್ಯಾಬ್ ಡೈನಾಮಿಕ್ಸ್ (Botlab Dynamics) ಸಂಸ್ಥೆಗೆ ಈ ಬಾರಿಯ ಡ್ರೋನ್‌ ಶೋ ಜವಾಬ್ದಾರಿ ವಹಿಸಲಾಗಿದೆ. 2023ರಲ್ಲಿ ಮೈಸೂರಿನಲ್ಲಿ ಬೃಹತ್ ಹುಲಿಯ ಆಕೃತಿ ಸೇರಿದಂತೆ ಸಂಕೀರ್ಣ 3D ವಿನ್ಯಾಸಗಳನ್ನು ಡ್ರೋನ್‌ಗಳ ಮೂಲಕ ನಿರ್ಮಿಸಿ ಗಿನ್ನೆಸ್ ದಾಖಲೆ ಮಾಡಿದ್ದ ಸಂಸ್ಥೆಯೇ ಈ ಬಾರಿ ಕೂಡ ಪ್ರದರ್ಶನ ನಡೆಸಲಿದೆ. ಕಳೆದ ವರ್ಷದ ಪ್ರದರ್ಶನದಲ್ಲಿ ಸೌರವ್ಯೂಹ, ವಿಶ್ವ ಭೂಪಟ, ಸೇನೆ, ನವಿಲು, ಹುಲಿ, ಡಾಲ್ಫಿನ್, ಹದ್ದು, ಶ್ರೀಕೃಷ್ಣನ ಕಾಳಿಂಗ ನೃತ್ಯ, ಅಂಬಾರಿ ಆನೆ, ಕರ್ನಾಟಕದ ನಕ್ಷೆ ಹಾಗೂ ಚಾಮುಂಡೇಶ್ವರಿ ಸೇರಿದಂತೆ ಹಲವು ಆಕೃತಿಗಳನ್ನು ಆಕಾಶದಲ್ಲಿ ಮೂಡಿಸಲಾಗಿತ್ತು. ಸುಮಾರು 4 ಕಿ.ಮೀ ವ್ಯಾಪ್ತಿಯಿಂದ ಡ್ರೋನ್‌ ಶೋ ವೀಕ್ಷಿಸಬಹುದಾಗಿದೆ.

 

TAGGED:#dasaradrone
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟರಾಜಕೀಯ

ರಾಜ್ಯದಲ್ಲಿ ನಿಜವಾಗಿ ಏನೂ ಅಭಿವೃದ್ಧಿ ಆಗಿಲ್ಲ, ಕಾಂಗ್ರೆಸ್ಸಿನ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ : ಶಾಸಕ ಬಿ.ವೈ.ವಿಜಯೇಂದ್ರ

January 14, 2026
ಮುಖಪುಟಮೈಸೂರು ನಗರ

‘ಪ್ರತಿನಿಧಿ’ ದಿನಪತ್ರಿಕೆಯ ‘ಲೇಡಿ ವಿಂಗ್ಸ್’ ಕ್ರೀಡೋತ್ಸವ ಸಂಪನ್ನ: ಕ್ರೀಡಾ ಸ್ಪರ್ಧೆಗಳಲ್ಲಿ ಮಹಿಳೆಯರ ಸಂಭ್ರಮ, ಆರೋಗ್ಯ ಜಾಗೃತಿ

July 21, 2026
ಜಿಲ್ಲೆ

ಅಡ್ಡ ಮತದಾನ ಸಂಬಂಧ ಪಕ್ಷದಲ್ಲಿ ಉಂಟಾಗಿದ್ದ ಗೊಂದಲ ಅಂತ್ಯ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

July 2, 2026
ಮುಖಪುಟಮೈಸೂರು ನಗರರಾಜಕೀಯ

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

November 7, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?