ವಾರಸುದಾರರ ಪತ್ತೆಗೆ ಮನವಿ
ಪ್ರತಿನಿಧಿ ವರದಿ ನಂಜನಗೂಡು
ನಂಜನಗೂಡು ತಾಲೂಕಿನ ತೊರೆಮಾವು ಗ್ರಾಮದ ಬಳಿ ಕಪಿಲಾ ನದಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಸ್ನಾನ ಮಾಡುವಾಗನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಸಂಬಂಧಿಕರ ಪತ್ತೆಗೆ ಮನವಿ ಮಾಡಿದ್ದಾರೆ.
ಚಹರೆ: ದುಂಡು ಮುಖ, 40 ರಿಂದ 45 ವರ್ಷ ವಯಸ್ಸು, ದೃಢಕಾಯ ಶರೀರ ಹೊಂದಿರುವ ವ್ಯಕ್ತಿಯಾಗಿದ್ದಾರೆ.
ದೇಹ ಸಂಪೂರ್ಣವಾಗಿ ಕೊಳೆತು ಹೋಗಿದ್ದು ಚರ್ಮ ಸುಲಿದಂತಿ ಆಗಿದೆ.
ಮೈಸೂರಿನ ಮೆಡಿಕಲ್ ಕಾಲೇಜು ಶವಾಗಾರದಲ್ಲಿ ಮೃತದೇಹವನ್ನು ಇರಿಸಲಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ನಂಜನಗೂಡು ಗ್ರಾಮಾಂತರ ಠಾಣೆ 08221226259 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.