ಬೆಂಗಳೂರು, ಮಾರ್ಚ್ 4, 2026 : ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ (Toxic ) ಸಿನಿಮಾ ರಿಲೀಸ್ (Release ) ಡೇಟ್ ಮುಂದಕ್ಕೆ ಹೋಗಿದೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಬೇಕಿತ್ತು.
ಯಶ್ ಅಭಿಮಾನಿಗಳಿಗೆ ಈಗ ಸಿನಿಮಾ ತಂಡ ಶಾಕಿಂಗ್ ಅಪ್ಡೇಟ್ ಕೊಟ್ಟಿದೆ. ಸಿನಿಮಾ ರಿಲೀಸ್ಗೆ ಕೆಲವೇ ದಿನ ಬಾಕಿ ಇರುವಾಗ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿದೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹೊಸ ರಿಲೀಸ್ ದಿನಾಂಕವನ್ನು ಕೂಡ ಘೋಷಣೆ ಮಾಡಲಾಗಿದೆ. ಜೂನ್ 4ರಂದು ಸಿನಿಮಾ ರಿಲೀಸ್ ಆಗಲಿದೆ.
ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿ ನಿರ್ಮಾಣ ಆಗಿದೆ. ಈ ಬಿಕ್ಕಟ್ಟು ಸದ್ಯಕ್ಕಂತೂ ಪರಿಹಾರ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಅಬುದಾಬಿ ಮೊದಲಾದ ಕಡೆಗಳಲ್ಲಿ ದಾಳಿ ಆಗುತ್ತಿದೆ. ಈ ಕಾರಣವನ್ನು ನೀಡಿ ಟಾಕ್ಸಿಕ್ ಮುಂದಕ್ಕೆ ಹಾಕಿರೋದಾಗಿ ತಂಡ ಮಾಹಿತಿ ಕೊಟ್ಟಿದೆ.
ಟಾಕ್ಸಿಕ್’ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದ್ದವು. ಈ ಚಿತ್ರದ ಟ್ರೇಲರ್ ಮಾರ್ಚ್ 8ರಂದು ರಿಲೀಸ್ ಆಗಬೇಕಿತ್ತು. ಇದಕ್ಕೆ ಎಲ್ಲಾ ಸಿದ್ಧತೆಗಳು ಕೂಡ ನಡೆದಿದ್ದವು. ಆದರೆ, ಇಸ್ರೇಲ್-ಇರಾನ್ ಮಧ್ಯೆ ಸಮರ ನಡೆಯುತ್ತಿರುವುದರಿಂದ ಸಿನಿಮಾ ರಿಲೀಸ್ ವಿಳಂಬ ಆಗುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.
