ಗಣೇಶ ಹಬ್ಬ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳ ಟಿಕೆಟ್ ದರ ಹೆಚ್ಚಳವಾಗಿದೆ. ಸಾರಿಗೆ ಇಲಾಖೆ ಆಯುಕ್ತರ ಎಚ್ಚರಿಕೆ ನಡುವೆಯೂ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ದಿನಗಳಲ್ಲಿ 500-700 ರೂಪಾಯಿ ಇರುವ ಟಿಕೆಟ್ ದರ ಈಗ ಹಬ್ಬ ಹಿನ್ನೆಲೆ 1500- 2500 ರೂ. ನಿಗದಿ ಮಾಡಲಾಗಿದೆ. ಪ್ರತಿ ಬಾರಿ ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ಗಳು ಪ್ರಯಾಣಿಕರಿಗೆ ದುಪಟ್ಟು ಹಣ ವಸೂಲಿ ಮಾಡುತ್ತವೆ. ಹೀಗಾಗಿ ದುಪ್ಪಟ್ಟು ಹಣ ಪಡೆಯದಂತೆ ಟಿಕೆಟ್ ಬುಕ್ಕಿಂಗ್ ಕಂಪನಿಗಳಿಗೆ ಸಾರಿಗೆ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದರು. ಆದರೂ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಸಾಮಾನ್ಯ ದಿನಗಳಲ್ಲಿ 500-700 ರೂಪಾಯಿ ಇದ್ದ ಟಿಕೆಟ್ ದರವನ್ನು 1500- 2500 ರೂಪಾಯಿಗೆ ಹೆಚ್ಚಳ ಮಾಡಿದೆ.
![](https://www.prathinidhi.net/wp-content/uploads/2023/09/16155787610782191594.jpg)