ಹೆಚ್ ಡಿ ಕೋಟೆ, ನವೆಂಬರ್ 6, 2025 : ಹೆಚ್ ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ಜಮೀನಿನಲ್ಲಿದ್ದ ಪಂಪ್ ಸೆಟ್ ಉಪಕರಣಗಳನ್ನು ಕದ್ದು ಕಳ್ಳರು ಎಸ್ಕೇಪ್ ಆಗಿರುವ ಘಟನೆ ಜರುಗಿದೆ.

ರೈತ ಲೋಕೇಶ್ ಎಂಬುವವರ ಜಮೀನಿನಲ್ಲಿ ಘಟನೆ ಜರುಗಿದೆ. ರೈತ ಲೋಕೇಶ್ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್ ವೆಲ್ ಕೊರೆಸಿ ಉಪಕರಣಗಳನ್ನು ಅಳವಡಿಸಿದ್ದರು ಎನ್ನಲಾಗಿದೆ. ಇದೀಗ ಐನಾತಿ ಕಳ್ಳರು ಸ್ಟಾರ್ಟರ್, ವಿದ್ಯುತ್ ಫ್ಯೂಸ್ ಜೆಟ್ ಎಗರಿಸಿ ತಮ್ಮ ಕೈಚಳಕ ತೋರಿದ್ದು, ರೈತ ಕುಟುಂಬವು ಸಂಕಷ್ಟಕ್ಕೆ ಸಿಲುಕಿದೆ.
ಘಟನೆ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತ ಕುಟುಂಬ ಮನವಿ ಮಾಡಿದೆ.
