ಬೆಂಗಳೂರು, ನವೆಂಬರ್ 17, 2025 : ರಾಜ್ಯದಲ್ಲಿ ದಿನೇ ದಿನೇ ಚಳಿ ಹೆಚ್ಚುತ್ತಿದ್ದು, ಮುಂದಿನ ಮೂರ್ನಾಲ್ಕು ದಿನ ಶೀತಗಾಳಿ ಪ್ರಭಾವ ಇರಲಿದೆ ಎಂದು ಹವಾಮಾನ ಇಲಾಖೆ (weather forecast ) ಹೇಳಿದೆ.
ಪ್ರಮುಖವಾಗಿ ಉತ್ತರ ಕರ್ನಾಟಕ ಹಲವು ಭಾಗಗಳಲ್ಲಿ ತಾಪಮಾನ ಕುಸಿದಿದೆ.ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪ ಮಾನ ಭಾರಿ ಪ್ರಮಾಣದಲ್ಲಿ ಕುಸಿದಿದೆ.ಕನಿಷ್ಠ ಉಷ್ಣಾಂಶ ಬೀದರ್‌ನಲ್ಲಿ 10 ಡಿಗ್ರಿ, ವಿಜಯಪುರದಲ್ಲಿ 11.6, ಧಾರವಾಡದಲ್ಲಿ 11.8 ಡಿಗ್ರಿಗೆ ಇಳಿಕೆಯಾಗಿದೆ.
ಈಗಾಗಲೇ ಬೆಳಗಿನ ವೇಳೆ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದ್ದು, ಮುಂದಿನ 2 ದಿನ ರಾಜ್ಯದಲ್ಲಿ ಚಳಿ ಇನ್ನಷ್ಟು ಹೆಚ್ಚಾಗಲಿದೆ. ಚಳಿಯ ಜತೆ ‘ಶೀತಗಾಳಿ’ಯ ಮುನ್ಸೂಚನೆ ನೀಡಲಾಗಿದೆ.
ಇನ್ನು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ರಾಮನಗರ, ತುಮಕೂರು, ಬೀದರ್, ವಿಜಯಪುರ, ಕಲಬುರಗಿ, ಮಂಡ್ಯ, ಕೊಡಗು ಜಿಲ್ಲೆಯ ಹಲವಡೆ ತಾಪಮಾನ ಕುಸಿದಿದೆ. ಗಢಗಢ ಚಳಿಗೆ ಜನರು ನಡುಗುತ್ತಿದ್ದಾರೆ. ಮುಂಜಾನೆ ವಾಕಿಂಗ್ ಹೋಗುವ ಜನರಿಗೆ ಹಿಮ ಸಾಕಷ್ಟು ತೊಂದರೆ ಕೊಡುತ್ತಿದ್ದೂ, ಕೊರೆಯುವ ಚಳಿ ಆರಂಭವಾಗಿರೋ ಹಿನ್ನೆಲೆ ಜನರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
