ಬೆಂಗಳೂರು, ಡಿಸೆಂಬರ್ 22, 2025 : ಇತ್ತೀಚೆಗೆ ವಿದೇಶಿಗರು ಅಕ್ರಮವಾಗಿ ನೆಲೆಯೂರಿದ್ದಾರೆ. ಕರ್ನಾಟಕದ ಹಲವೆಡೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗ್ತಿದ್ದಾರೆ. ಸರ್ಕಾರದ ಅಧಿಕೃತ ಅಂಕಿ- ಅಂಶಗಳ ಪ್ರಕಾರ ಒಟ್ಟು 485 ಮಂದಿ ರಾಜ್ಯದಲ್ಲಿ ಅಕ್ರಮವಾಗಿದೆ ನೆಲೆಸಿದ್ದಾರೆ. ಇದರ ಪೈಕಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ನಿವಾಸಿಗಳು ಇದ್ದಾರೆ. ಈಗಾಗಲೇ ಅಕ್ರಮ ನಿವಾಸಿಗಳನ್ನು ಪರಿಶೀಲನೆ ನಡೆಸಿ 308 ಮಂದಿಯನ್ನು ಗಡಿಪಾರು ಮಾಡಲಾಗಿದೆ.
ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಕಂಡುಹಿಡಿದು ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸವಾಲಿನ ಸಂಗತಿಯಾಗಿದೆ. ವಿದ್ಯಾಭ್ಯಾಸ ಸೇರಿದಂತೆ ಬೇರೆ ಬೇರೆ ಉದ್ದೇಶಕ್ಕಾಗಿ ಬಂದಿರುವ ವಿದೇಶಿಗರು ವಿಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆ ನಿಂತಿದ್ದಾರೆ. ಇಂತವರ ವಿರುದ್ಧ ಪೊಲೀಸ್ ಇಲಾಖೆ ಇದೀಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.
ಯಾವ ನಗರದಲ್ಲಿ ಎಷ್ಟು ಪ್ರಕರಣ?
ಬೆಂಗಳೂರು ನಗರ- 344, ಮಂಗಳೂರು ನಗರ- 41,ಬೆಂಗಳೂರು ಜಿಲ್ಲೆ- 49
ತುಮಕೂರು- 1,ಕೋಲಾರ – 12,ಹಾಸನ -3,ಕೊಡಗು – 1, ಚಿತ್ರದುರ್ಗ- 6,ಧಾರವಾಡ- 2,ಶಿವಮೊಗ್ಗ- 12,ಉಡುಪಿ- 10,ಉತ್ತರ ಕನ್ನಡ – 4 ಮಂದಿ ವಿದೇಶಿಗರು ಸಿಕ್ಕಿಬಿದ್ದಿದ್ದಾರೆ.
ಅಕ್ರಮ ವಲಸಿಗರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ಧ ಒಟ್ಟು 5 ಪ್ರಕರಣಗಳು ದಾಖಲಾಗಿದೆ
