ಬೆಂಗಳೂರು, ಜನವರಿ 14, 2026: ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್ ನಿವಾಸಿ ರೋಹಿತ್ ಅವರ ಮನೆಯಲ್ಲಿ ಕೆಲಸಕ್ಕಿದ್ದ ಸೌಮ್ಯ ಎಂಬಾಕೆ, 42 ಗ್ರಾಂ ಚಿನ್ನದ ಮಂಗಳಸೂತ್ರ ಹಾಗೂ ಬೆಲೆಬಾಳುವ ಮೈಕೆಲ್ ಕೋರ್ಸ್ ಗಡಿಯಾರವನ್ನು ಕದ್ದು ಸಿಕ್ಕಿಬಿದ್ದಿದ್ದಾಳೆ.
ಕಳ್ಳತನದ ನಂತರ ಕೆಲಸ ಬಿಟ್ಟಿದ್ದ ಸೌಮ್ಯ, ತಾನು ಕದ್ದ ಬ್ರಾಂಡೆಡ್ ಗಡಿಯಾರವನ್ನು ಧರಿಸಿ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಳು. ಇದನ್ನು ಆಕಸ್ಮಿಕವಾಗಿ ಗಮನಿಸಿದ ರೋಹಿತ್, ಆ ಫೋಟೋದ ಸ್ಕ್ರೀನ್‌ಶಾಟ್ ಸಮೇತ ಪೊಲೀಸರಿಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಬೆಳ್ಳಂದೂರು ಪೊಲೀಸರು ಸೌಮ್ಯಳನ್ನು ಬಂಧಿಸಿದ್ದು, ಆಕೆಯಿಂದ 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಗಡಿಯಾರವನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
