PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಬಿಸಿಲ ಬೇಗೆಯಲ್ಲಿ ತಣಿದ ಪ್ರಯಾಣಿಕರ ದಾಹ: ಮೈಸೂರು ಸಾರಿಗೆ ಸಿಬ್ಬಂದಿಯ ಮಾನವೀಯ ಕಾರ್ಯ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಬಿಸಿಲ ಬೇಗೆಯಲ್ಲಿ ತಣಿದ ಪ್ರಯಾಣಿಕರ ದಾಹ: ಮೈಸೂರು ಸಾರಿಗೆ ಸಿಬ್ಬಂದಿಯ ಮಾನವೀಯ ಕಾರ್ಯ
ಮುಖಪುಟಮೈಸೂರು ನಗರ

ಬಿಸಿಲ ಬೇಗೆಯಲ್ಲಿ ತಣಿದ ಪ್ರಯಾಣಿಕರ ದಾಹ: ಮೈಸೂರು ಸಾರಿಗೆ ಸಿಬ್ಬಂದಿಯ ಮಾನವೀಯ ಕಾರ್ಯ

Prathinidhi News
Last updated: February 26, 2026 11:09 am
Prathinidhi News
Published February 26, 2026
Share
SHARE

ಮೈಸೂರು, ಫೆಬ್ರವರಿ 26, 2026: ಸುಡು ಬೇಸಿಗೆಯ ಬಿಸಿಲ ಜಳಕ್ಕೆ ಮೈಸೂರು ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರು ಮಾದರಿಯಾಗಿದ್ದಾರೆ. ಟಿ. ನರಸೀಪುರ – ಬನ್ನೂರು – ಮಂಡ್ಯ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿ ತೋರುತ್ತಿರುವ ಈ ಮಾನವೀಯ ಕಾಳಜಿಗೆ ಈಗ ಸಾರ್ವಜನಿಕರು ಮನಸೋತಿದ್ದಾರೆ.

ನಿರ್ವಾಹಕ ಲಕ್ಷ್ಮೇಶ್ ಹಾಗೂ ಚಾಲಕ ಹೇಮಂತ್ ಅವರು ಬಸ್ಸಿನೊಳಗೆ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಪ್ರಯಾಣಿಕರ ದಾಹ ನೀಗಿಸುತ್ತಿದ್ದಾರೆ. ಬೇಸಿಗೆಯ ತಾಪಕ್ಕೆ ನೀರಿಲ್ಲದೆ ಪರದಾಡುವ ಪ್ರಯಾಣಿಕರ ಸಂಕಷ್ಟವನ್ನು ಗಮನಿಸಿದ ಈ ಜೋಡಿ, ಸ್ವಯಂ ಪ್ರೇರಿತರಾಗಿ ಬಸ್ಸಿನಲ್ಲಿ ನೀರಿನ ಕ್ಯಾನ್‌ಗಳನ್ನು ಅಳವಡಿಸಿದ್ದಾರೆ. ಪ್ರತಿದಿನ ಶುದ್ಧ ನೀರಿನ ಘಟಕಗಳಿಂದ ಎರಡು-ಮೂರು ಕ್ಯಾನ್ ನೀರನ್ನು ತಂದು ಬಸ್ಸಿನಲ್ಲಿ ಇರಿಸುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ.

ಇವರ ಈ ನಿಸ್ವಾರ್ಥ ಸೇವೆಯನ್ನು ಕಂಡು ಪ್ರೇರಿತರಾದ ಅದೇ ಮಾರ್ಗದ ಇತರ ಐದು ಬಸ್‌ಗಳ ಸಿಬ್ಬಂದಿಯೂ ಈಗ ತಮ್ಮ ಬಸ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಆರಂಭಿಸಿದ್ದಾರೆ. “ನಮ್ಮ ಕರ್ತವ್ಯದ ಜೊತೆಗೆ ಜನರಿಗೆ ಸ್ವಲ್ಪ ನೆರವಾಗುವುದು ನಮಗೆ ಸಿಗುವ ದೊಡ್ಡ ತೃಪ್ತಿ. ಪ್ರಯಾಣಿಕರ ಮುಖದಲ್ಲಿನ ಆ ಸಮಾಧಾನವೇ ನಮಗೆ ಗೌರವ,” ಎನ್ನುವುದು ಈ ಸಿಬ್ಬಂದಿಯ ನಿಸ್ವಾರ್ಥ ನುಡಿ. ಮಂಡ್ಯ ಮತ್ತು ಮೈಸೂರು ಭಾಗದ ಪ್ರಯಾಣಿಕರು ಸಾರಿಗೆ ಸಿಬ್ಬಂದಿಯ ಈ ಪುಣ್ಯದ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಎಲ್ಲೆಡೆ ಪ್ರಶಂಸೆಯ ಮಹಾಪೂರವೇ ಹರಿಯುತ್ತಿದೆ.

- ಜಾಹೀರಾತು -
Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ನಂಜನಗೂಡುಮುಖಪುಟಸನ್ನಿಧಾನ

ಗ್ರಾಮದೇವತೆ ಜಾತ್ರೆಯಲ್ಲಿ ವಿಡಿಯೋ ಮಾಡಿದರೆ ₹30 ಸಾವಿರ ದಂಡ: ಗೋಳೂರು ಗ್ರಾಮಸ್ಥರ ಖಡಕ್ ಎಚ್ಚರಿಕೆ

February 9, 2026
ಮುಖಪುಟಮೈಸೂರು ನಗರ

ಇಂಧನ ಕ್ಷೇತ್ರದ ಖಾಸಗೀಕರಣಕ್ಕೆ ಕೆಇಬಿ ನೌಕರರ ಯೂನಿಯನ್ ಹಾಗೂ ಸಂಘ ಸಂಸ್ಥೆಗಳ ಒಕ್ಕೂಟದಿಂದ ವಿರೋಧ ; ಸಾಂಕೇತಿಕ ಪ್ರತಿಭಟನೆ

February 12, 2026
ಮುಖಪುಟಮೈಸೂರು ನಗರರಾಜಕೀಯ

ದ್ದರಾಮಯ್ಯ ವರ್ಸಸ್ ಬೊಮ್ಮಾಯಿ: ‘5 ವರ್ಷ ನಾನೇ ಸಿಎಂ’ ಹೇಳಿಕೆ ದೈನೇಸಿ ಸ್ಥಿತಿ – ಬೊಮ್ಮಾಯಿ ಟೀಕೆ

November 24, 2025
ಮುಖಪುಟಮೈಸೂರು ನಗರ

ಮೈಸೂರಿನಿಂದ ಅಯೋಧ್ಯೆಯತ್ತ ಭಕ್ತರ ಮಹಾಪಯಣ: ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಧಾರ್ಮಿಕ ಯಾತ್ರೆ

December 18, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?