ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ.. ಮತ್ತೊಬ್ಬ ಜೀನಿಯಸ್ ಹಿಟ್ ಮ್ಯಾನ್ ರೋಹಿತ್ ಶರ್ಮಾ.. ಬಹುಶಹ ಇಬ್ಬರಿಗೂ ವಯಸ್ಸೇ ಆಗಲ್ಲ ಅನ್ಸತ್ತೆ.. ಇನ್ನೇನು ಈ ಇಬ್ಬರು ದಿಗ್ಗಜ ಬ್ಯಾಟರ್ಸ್ ಕಥೆ ಮುಗಿಯಿತು ಅನ್ನೋ ಲೆಕ್ಕಾಚಾರಗಳು ಶುರುವಾಗಿದ್ದ ಬೆನ್ನಲ್ಲೇ ROKO ಜೋಡಿ ಬ್ಯಾಟ್ ಮೂಲಕ ಮತ್ತೆ ಸದ್ದು ಮಾಡಿದೆ. ರೋ-ಕೊ ಜೋಡಿ ಮತ್ತೊಮ್ಮೆ ಕ್ರಿಕೆಟ್ ಅಂಗಳದಲ್ಲಿ ಕಮಾಲ್ ಮಾಡಿದೆ.
ಈಗಾಗಲೇ ಟೆಸ್ಟ್ ಹಾಗೂ ಟಿ೨೦ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋ-ಕೊ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರವೇ ಆಡುವ ನಿರ್ಧಾರ ಮಾಡಿದ್ದಾರೆ.ಇಬ್ಬರ ಕಮಿಟ್ಮೆಂಟ್ ಹಾಗೂ ಫಾರಂ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇದೀಗ ಎಲ್ಲಾ ಟೀಕೆಗಳಿಗೂ ಬ್ಯಾಟ್ ಮೂಲಕವೇ ಸ್ಟಾರ್ ಬ್ಯಾಟರ್ಸ್ ಉತ್ತರ ನೀಡಿದ್ದಾರೆ.

ಇಬ್ಬರು ದಿಗ್ಗಜ ಆಟಗಾರರ ಸೊಗಾಸಾದ ಆಟ ನೋಡಲು ಹಂಬಲಿಸುತ್ತಿದ್ದ ಫ್ಯಾನ್ಸ್‌ಗಳಿಗೆ ರೋ-ಕೊ ಜೋಡಿ ರಸದೌತಣವನ್ನೇ ನೀಡಿದೆ. ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ತವರು ರಾಂಚಿಯಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಬ್ಬರು ಆಟಗಾರರ ಬೊಂಬಾಟ್ ಪ್ರದರ್ಶನ ಫ್ಯಾನ್ಸ್‌ಗಳನ್ನು ರಂಜಿಸಿದೆ.
ಹರಿಣಗಳ ಎದುರು ಅದ್ಭುತ ಆಟವಾಡಿದ ಕಿಂಗ್ ಕೊಹ್ಲಿ ಅಮೋಘ ಶತಕ ಬಾರಿಸಿ ಮಿಂಚಿಸಿದರೆ. ಹಿಟ್ ಮ್ಯಾನ್ ರೋಹಿತ್ ಶರ್ಮ ಕೂಡ ಅತ್ಯಾಕರ್ಷಕ ಅರ್ಧಶತಕ ಸಿಡಿಸಿ ಕಕ್ಕಿರಿದು ತುಂಬಿದ್ದ ಅಭಿಮಾನಿಗಳನ್ನ ರಂಜಿಸಿದ್ದಾರೆ.
ಬ್ಯಾಟಿಂಗ್ ಅಷ್ಟೇ ಅಲ್ಲದೇ ಫೀಲ್ಡಿಂಗ್ ವೇಳೆ ಮೈದಾನದಲ್ಲಿ ಅತ್ಯಂತ ಲವಲವಿಕೆಯಿಂದ ಕಾಣಿಸಿಕೊಂಡ ಇಬ್ಬರು ಆಟಗಾರರು, ಪಂದ್ಯದುದ್ದಕ್ಕೂ ನಾಯಕ ಕೆ.ಎಲ್.ರಾಹುಲ್ ಬೆನ್ನಿಗೆ ನಿಲ್ಲುವ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.
ಇಬ್ಬರು ಆಟಗಾರರು ನಿವೃತ್ತಿಯ ಅಂಚಿನಲ್ಲಿದ್ದರೂ ತಮ್ಮ ಮನಮೋಹಕ ಆಟದ ಮೂಲಕ ತಮ್ಮ ಕ್ರಿಕೆಟ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದು, ಫ್ಯಾನ್ಸ್‌ಗಳ ದಿಲ್ ಖುಷ್ ಆಗುವಂತೆ ಮಾಡಿದೆ. ಅಯ್ಯೋ ಇವರಿಬ್ಬರ ಕಥೆ ಮುಗಿತು ಇನ್ನೇನಿದ್ದರೂ ನಿವೃತ್ತಿಯೊಂದೇ ಗಟ್ಟಿ ಎಂದು ಗೊಣಗುತ್ತಿದ್ದ ಟೀಕಾಕಾರರಿಗೆ ROKO ಜೋಡಿ ಖಡಕ್ ಉತ್ತರ ನೀಡಿದೆ.
