ಮೈಸೂರು : ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ನ ಹಮಾಸ್ ಉಗ್ರರ ನಡುವೆ ಯುದ್ಧ ನಡೆದಿದೆ. ರಾಜ್ಯದಲ್ಲಿ ಪ್ಯಾಲೆಸ್ಟೈನ್ನ ಹಮಾಸ್ ಉಗ್ರರರ ಪರವಾದ ಹೇಳಿಕೆ ಮತ್ತು ಘೋಷಣೆಗಳು ಕೇಳಿಬರುತ್ತಿವೆ. ಅದೇರೀತಿಯಾಗಿ ಮೈಸೂರಿನ ಮಿಲಾದ್ ಪಾರ್ಕ್ ಬಳಿ ಪ್ಯಾಲೆಸ್ಟೈನ್ ಪರವಾಗಿ ರ್ಯಾಲಿ ನಡೆಸಲು ನಿರ್ಧರಿಸಿದ್ದ ಎಸ್ಡಿಪಿಐ ಸಂಘಟನೆಗೆ ನಗರ ಪೊಲೀಸ್ ಆಯುಕ್ತ ಡಾ. ರಮೇಶ್ ಅನುಮತಿ ನೀಡಿಲ್ಲ. ಬದಲಿಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಒಂದು ವೇಳೆ ರ್ಯಾಲಿ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಏನದಾರೂ ಮಾಹಿತಿ ಹಂಚಿಕೊಂಡರೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.