ಮೈಸೂರು: ಖಾಸಗಿ ಶಾಲೆ ಬಸ್ ಗೆ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಶಾಲಾ ಮಿನಿ ಬಸ್ ರಸ್ತೆಗೆ ಉರುಳಿ ಬಿದ್ದಿರುವ ಘಟನೆ ಸಾಲಿಗ್ರಾಮ- ಭೇರ್ಯ ಹೆದ್ದಾರಿಯಲ್ಲಿ ಬರುವ ಕುರುಬಹಳ್ಳಿ ಗೇಟ್ ಬಳಿ ನಡೆದಿದೆ. ಈ ಮಿನಿ ಬಸ್ ಸಾಲಿಗ್ರಾಮ ತಾಲ್ಲೂಕಿನ ಮಿರ್ಲೆ ಗ್ರಾಮದ ಸಿಇಟಿ ಶಾಲೆಗೆ ಸೇರಿದ್ದು ಎನ್ನಲಾಗಿದ್ದು, ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ತೆರಳುತ್ತಿದ್ದ ಟ್ಯಾಂಕರ್ ಕುರುಬಹಳ್ಳಿ ಗ್ರಾಮದಿಂದ ಇದೇ ಮಾರ್ಗವಾಗಿ ಶಾಲಾ ಮಕ್ಕಳನ್ನು ತುಂಬಿಕೊಂಡು ಮಿರ್ಲೆ ಗ್ರಾಮಕ್ಕೆ ಬಸ್ ತೆರಳುತ್ತಿತ್ತು. ಕುರುಬಹಳ್ಳಿ ಗೇಟ್ ಬಳಿ ಏಕಾಏಕಿ ಶಾಲಾ ಮಕ್ಕಳಿರುವ ಮಿನಿ ಬಸ್ಸ್ ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಮಿನಿ ಬಸ್ ಉರುಳಿದೆ. ಬಸ್ಸ್ ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಯಗೊಂಡ ಮಕ್ಕಳ ರವಾನೆ ಮಾಡಲಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.