ನಟಿ ಸಮಂತಾ, ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ. ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಈ ಮದುವೆ ನಡೆದಿದೆ. ನಾಗ ಚೈತನ್ಯರೊಂದಿಗಿನ ದಾಂಪತ್ಯ ಮುರಿದು ಬಿದ್ದ ನಂತರ ಸಮಂತಾ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ ಕೆಲಸ ಮಾಡುವಾಗ ರಾಜ್ ಜೊತೆ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿದೆ. ಇದೀಗ ಅವರ ಹೊಸ ಬಾಳಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಕೋರುತ್ತಾ ಇದ್ದಾರೆ.

ಸಮಂತಾ ಅವರು ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಕ್ಯಾಪ್ಶನ್ನಲ್ಲಿ ವಿವಾಹದ ಡೇಟ್ ಹಾಕಿದ್ದಾರೆ. ಪೂಜಾ ವಿಧಿ-ವಿಧಾನದ ಫೋಟೋ ಜೊತೆಗೆ ರಾಜ್ ಜೊತೆ ಇರುವ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಈ ಮದುವೆ ನಡೆದಿದೆ. ಸಮಂತಾ ಅವರು ಜಗ್ಗಿ ವಾಸುದೇವ್ ಅವರ ಅನುಯಾಯಿ. ಹೀಗಾಗಿ, ಇಶಾದಲ್ಲಿಯೇ ಈ ಮದುವೆ ನಡೆದಿದೆ.
ಸಮಂತಾ ಅವರು ಮೊದಲು ನಾಗ ಚೈತನ್ಯ ಅವರನ್ನು ವಿವಾಹ ಆದರು. ನಾಲ್ಕೇ ವರ್ಷಗಳಲ್ಲಿ ಇವರ ದಾಂಪತ್ಯ ಕೊನೆ ಆಯಿತು. ಆ ಬಳಿಕ ಸಮಂತಾ ಪ್ರತ್ಯೇಕವಾಗಿ ಜೀವನ ನಡೆಸಲು ಆರಂಭಿಸಿದರು. ಕಳೆದ ವರ್ಷಾಂತ್ಯಕ್ಕೆ ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹ ನಡೆದಿತ್ತು. ಈ ವರ್ಷ ಸಮಂತಾ ಮದುವೆ ಆಗಿದ್ದಾರೆ.
