ಬೆಂಗಳೂರು , ಡಿಸೆಂಬರ್ 29, 2025 : ರಾಜಧಾನಿ ಬೆಂಗಳೂರಿನ ಅನೇಕ ಭಾಗಗಳಲ್ಲಿ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಕಳೆದ 4 ವರ್ಷಗಳಲ್ಲಿ ಈ ವರ್ಷವೇ ಗಾಳಿಯ PM ಪ್ರಮಾಣ ಮಿತಿ ಮೀರಿದೆ.ಗಾಳಿಯ ಗುಣಮಟ್ಟ 173 ದಾಖಲಾಗಿದ್ದು, ವಿಷಗಾಳಿ ಜನರ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಅತಿಯಾದ ಮಾಲಿನ್ಯವೇ ಬೆಂಗಳೂರು ವಾತಾವರಣ ಹದಗೆಡೋಕೆ ಪ್ರಮುಖ ಕಾರಣವಾಗಿದೆ.
ಗಾಳಿಯ ಗುಣಮಟ್ಟ ಕಳಪೆ ಆಗಿರೋದ್ರಿಂದ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸೂಚನೆ ನೀಡಿದ್ದಾರೆ. ಪ್ರಮುಖವಾಗಿ ವಿಷಗಾಳಿ ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.
ಯಾವ ನಗರದಲ್ಲಿ AQI ಎಷ್ಟು..?
ಬೆಂಗಳೂರು –173,ಮಂಗಳೂರು-136,ಮೈಸೂರು – 174,ಬೆಳಗಾವಿ – 142,ಕಲಬುರ್ಗಿ – 107,ಶಿವಮೊಗ್ಗ – 73,ಬಳ್ಳಾರಿ – 185,ಹುಬ್ಬಳ್ಳಿ- 96, ಉಡುಪಿ –110,ವಿಜಯಪುರ –117
ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಮುಂದಿನ 5 ವರ್ಷದಲ್ಲಿ ಇದು ಇನ್ನಷ್ಟು ಕಳಪೆ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
