ಮಾಜಿ ಸಚಿವ ಡಾ.ಕೆ.ಸುಧಾಕರ್ಗೆ ಬಿಜೆಪಿ ಲೋಕಸಭಾ ಟಿಕೆಟ್ ನೀಡಿದ್ದಕ್ಕೆ ಪ್ರದೀಪ್ ಈಶ್ವರ್ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಪಾರ್ಲಿಮೆಂಟ್ ಪವಿತ್ರ ಜಾಗ, ಪಾರ್ಲಿಮೆಂಟ್ ಹೋಗುವುದಕ್ಕೆ ಸುಧಾಕರ್ಗೆ ಬಿಡಲ್ಲ. ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಲ್ಲಲಿ. ಆದ್ರೆ, ಸಂಸತ್ ಪ್ರವೇಶಿಸಲು ಸುಧಾಕರ್ಗೆ ಬಿಡುವುದಿಲ್ಲ ಎಂದು ಚಿಕ್ಕಬಳ್ಳಾಪುರ ‘ಕೈ’ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.