ಹುಣಸೂರು ಪ್ರತ್ಯೇಕ ಜಿಲ್ಲೆ ಕೂಗು ಮತ್ತೆ ಮುನ್ನೆಲೆಗೆ ಬಂದಿದ್ದು ಹುಣಸೂರು ತಾಲ್ಲೂಕನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ದೇವರಾಜ ಅರಸು ಹುಟ್ಟೂರು ಪ್ರತ್ಯೇಕ ಜಿಲ್ಲೆಯಾದ್ರೆ ಸಾಕಷ್ಟು ಅನುಕೂಲಗಳು ಆಗುತ್ತದೆ. ಮೈಸೂರು ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಒತ್ತಡ ಇದೆ. ತಾಲೂಕು ಕೇಂದ್ರಗಳಿಗೆ ಹೋಗಲು ಕಷ್ಟವಾಗುತ್ತದೆ. ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. 6 ತಾಲೂಕುಗಳಿಗೆ ನಾಲ್ಕು ಜನ ಶಾಸಕರಿದ್ದೇವೆ. ಎಲ್ಲಾ ಶಾಸಕರ ಜೊತೆ ಮಾತನಾಡಿದ್ದೇನೆ. ಸಿಎಂ ಜೊತೆಯೂ ಸಹ ಮಾತನಾಡುತ್ತೇನೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ ಕೋಟೆ ರಾಜ್ಯದಲ್ಲೇ ಸಂಪತ್ಭರಿತ ತಾಲ್ಲೂಕು. ನೂರಾರು ಕೋಟಿ ತಂಬಾಕಿನಿಂದ ಆದಾಯ ಬರುವ ತಾಲ್ಲೂಕುಗಳಿವೆ. ಆರು ತಾಲೂಕುಗಳನ್ನ ಸೇರಿಸಿ ಒಂದು ಜಿಲ್ಲೆಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.