ಬೆಂಗಳೂರು : ಈಗಾಗಲೇ ರಾಜ್ಯ ಸಾರಿಗೆ ಇಲಾಖೆ ಹೆಚ್.ಎಸ್.ಆರ್.ಪಿ ನೇಮ್ ಬೋರ್ಡ್ ಹಾಕಿಸಿಕೊಳ್ಳಲು ವಾಹನ ಸವಾರರಿಗೆ ಡೆಡ್ಲೈನ್ ನೀಡಿದೆ. ಅದರೆ ಜನರು ಯಾರು ಕೂಡ ಹೊಸ ನಂಬರ್ ಪ್ಲೇಟ್ ಗಳನ್ನು ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ದಂಡ ಪ್ರಯೋಗಕ್ಕೆ ಮುಂದಾಗಿದೆ. ಫೆ.17 ರಿಂದ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಇಲ್ಲ ಅಂದರೆ ದಂಡ ಫಿಕ್ಸ್. ಮೊದಲನೆ ಬಾರಿ ಸಿಕ್ಕಿಬಿದ್ದರೆ ಸಾವಿರ, 2ನೇ ಬಾರಿ ಸಿಕ್ಕಿಬಿದ್ದರೆ 2 ಸಾವಿರ ದಂಡ ಹಾಕಲಾಗುತ್ತೆ. 2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ಗಳನ್ನು ಹಾಕಿಸಿಕೊಳ್ಳುವಂತೆ ನೀಡಲಾಗಿದ್ದ ಗಡುವು ಸಮೀಪಿಸುತ್ತಿದ್ದರೂ ನಂಬರ್ ಪ್ಲೇಟ್ ಬದಲಾವಣೆಗೆ ವಾಹನ ಮಾಲೀಕರು ಆಸಕ್ತಿ ತೋರಿಲ್ಲ. ಹೀಗಾಗಿ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿರುವ ಸಾರಿಗೆ ಇಲಾಖೆ ಫೆ.17ರ ನಂತರ ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ.