ಮೈಸೂರು: ಆನೆ ದಾಳಿಗೆ ಅರಣ್ಯ ಸಿಬ್ಬಂದಿ ಬಲಿಯಾದ ಘಟನೆ ಮೈಸೂರಿನ ಮಲೆಯೂರು ರೇಂಜ್ ಕಬ್ಬೇಪುರ ಹಾಡಿಯಲ್ಲಿ ನಡೆದಿದ್ದು, ಅರಣ್ಯ ವೀಕ್ಷಕ ರಾಜು ಆನೆ ದಾಳಿಗೆ ಬಲಿಯಾಗಿದ್ದಾರೆ. ಮಲೆಯೂರು ವಲಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಏಕಾಏಕಿ ಆನೆ ದಾಳಿ ನಡೆಸಿದ್ದು, ರಾಜು ಅವರನ್ನ ಕಾಲಡಿ ಹಾಕಿ ತುಳಿದು ಕೊಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.