ಮೈಸೂರು, ನವೆಂಬರ್ 13, 2025 : ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ನ.14ರಿಂದ 20ರವರೆಗೆ ಜಿಲ್ಲೆಯ ವಿವಿಧೆಡೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ-2025 ಅನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಬಗ್ಗೆ ಒಕ್ಕೂಟದ ಉಪಾಧ್ಯಕ್ಷ ಬಿ.ಎನ್.ಸದಾನಂದ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
*ಆತ್ಮನಿರ್ಭರ ಭಾರತ ಸಾಧನೆಗೆ ವಾಹಕ ಗಳಾಗಿ ಸಹಕಾರ ಸಂಸ್ಥೆಗಳು’ ಎಂಬ ಧೈಯ ದೊಂದಿಗೆ ನ.14ರಂದು ಬೆಳಿಗ್ಗೆ 10 ಗಂಟೆಗೆ ಎಚ್.ಡಿ.ಕೋಟೆಯ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರು ಸಹಕಾರ ಸಪ್ತಾಹವನ್ನು ಉದ್ಘಾಟಿಸುವರು. ಸಂಸದ ಸುನಿಲ್ ಬೋಸ್, ಶಾಸಕ ಜಿ.ಡಿ.ಹರೀಶ್ ಗೌಡ ಅಧ್ಯಕ್ಷತೆ ವಹಿಸುವರು, ಮೈಮುಲ್ ಅಧ್ಯಕ್ಷ ಕೆ. ಈರೇಗೌಡ ಸಹಕಾರಿಗಳನ್ನು ಸನ್ಮಾನಿಸುವರು ಎಂದು ಹೇಳಿದರು.
ಕಾರ್ಯಕ್ರಮದ ವಿವರ..,
ನ.15ರಂದು ನಂಜನಗೂಡು ಅಂಬೇಡ್ಕರ್ ವೃತ್ತದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನ. ನ.16ರಂದು ತಿ.ನರಸೀಪುರದ ಎಪಿಎಂಸಿ ಆವರಣದ ಮೈಮುಲ್ ಉಪ ಕಚೇರಿ ಸಭಾಂಗಣ. ನ.17ರಂದು ಕೆ.ಆರ್. ನಗರದ ಅಗ್ನಿಶಾಮಕ ಠಾಣೆ ಮುಂಭಾಗದ SRM ಕನ್ವೆನ್ಸನ್ ಹಾಲ್,ನ.18ರಂದು ಪಿರಿಯಾಪಟ್ಟಣ ತಾಲ್ಲೂಕಿನ ಕಿತ್ತೂರಿನ ಹೊಸಟ್ಟಿ ಸಮುದಾಯ ಭವನ. ನ.19ರಂದು ಹುಣಸೂರು ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮಗಳು ಬೆಳಿಗ್ಗೆ 10ಕ್ಕೆ ನಡೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಬಿ.ವಿ.ಗುರುರಾಜ್, ಮೈಮುಲ್ ಅಧ್ಯಕ್ಷ ಕೆ.ಈರೇಗೌಡ, ಹನುಮನಾಳು ಸಿದ್ದೇಗೌಡ, ಉಮಾಶಂಕರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
