ಮೈಸೂರು, ಡಿಸೆಂಬರ್ 11, 2025 : ಮೈಸೂರಿನ ಹೆಮ್ಮೆಯ ಅಂಬಾವಿಲಾಸ ಅರಮನೆಯ ಮುಖ್ಯದ್ವಾರದ ಮೇಲ್ಭಾಗ ಕುಸಿತವಾಗಿದ್ದು, ಭಾರಿ ಅನಾಹುತ ತಪ್ಪಿದೆ.
ಮೈಸೂರು ಅರಮನೆಯ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತವಾಗಿದ್ದು,ಅರಮನೆಯ ವರಾಹ ಗೇಟ್ ನ ಮುಖ್ಯದ್ವಾರದ ಮೇಲ್ಚಾವಣಿ ಕುಸಿದು ಆತಂಕಕ್ಕೆ ಕಾರಣವಾಗಿದೆ.ಸ್ವಲ್ಪ ಪ್ರಮಾಣದಲ್ಲಿ ಮೇಲ್ಚಾವಣಿ ಕುಸಿತವಾಗಿದೆ. ಇವತ್ತು ಬೆಳಿಗ್ಗೆ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.ಸಾರ್ವಜನಿಕರು ಆಗಮಿಸುವ ಗೇಟ್ ಬಳಿಯೇ ಕುಸಿತವಾಗಿದೆ.

ಮೇಲ್ಚಾವಣಿ ಕೆಳಗೆ ಸಿಬ್ಬಂದಿ ನಿಲ್ಲಿಸಿದ್ದ ಬೈಕ್ ಮೇಲೆಯೇ ಅವಶೇಷಗಳು ಬಿದ್ದಿದೆ.ಘಟನೆ ಬಳಿಕ ಗೇಟ್ ಬಳಿ ಬ್ಯಾರೀಕೇಟ್ ಗಳನ್ನು ಅಳವಡಿಕೆ ಮಾಡಲಾಗಿದೆ.ಸ್ವಚ್ಛತಾ ಸಿಬ್ಬಂದಿಯಿಂದ ಬಿದ್ದಿದ್ದ ಮೇಲ್ಚಾವಣಿಯ ಅವಶೇಷಗಳ ತೆರವು ಮಾಡಲಾಗಿದೆ.
ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನೇಕ ಗೋಡೆಗಳ ಮೇಲೆಯೂ ಬಿರುಕು ಮೂಡಿದ್ದು, ನಿರ್ವಹಣೆ ಕೊರತೆಯಿಂದ ಘಟನೆ ಸಂಭವಿಸಿದ್ಯಾ ಅನ್ನೋ ಅನುಮಾನ ಮೂಡಿದೆ.
ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಮುಂದೆ ಕ್ರಿಸ್ಮಸ್ ಹಬ್ಬವಿದ್ದು ವೀಕ್ಷಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ನಡುವೆ ಗೋಡೆಯ ಮೇಲಿನ2 ಭಾಗ ಕುಸಿತವಾಗಿದ್ದು , ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ.
