ನವದೆಹಲಿ/ ಬೆಂಗಳೂರು: ಲೋಕಸಭೆ ಚುನಾವಣೆ 2024 ರ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟವಾಗಿದ್ದು, ದೇಶದ 543 ಸ್ಥಾನಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆದರೆ, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಒಂದು ಹಂತದಲ್ಲಿ, ಇನ್ನುಳಿದ 14 ಕ್ಷೇತ್ರಗಳಿಗೆ ಇನ್ನೊಂದು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 26 ರಂದು ನಡೆದರೆ, ಎರಡನೆ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ.
ಲೋಕಸಭೆ ಚುನಾವಣೆ 2024ರ ಎರಡನೇ ಹಂತದ ಚುನಾವಣೆ ನಡೆಯುವಾಗ ಕರ್ನಾಟಕದಲ್ಲಿರುವ ಲೋಕಸಭೆ ಕ್ಷೇತ್ರಗಳ ಮೊದಲ ಹಂತದ ಚುನಾವಣೆ ನಡೆಯುತ್ತದೆ.
ಲೋಕಸಭೆ ಚುನಾವಣೆ 2024; ಕರ್ನಾಟಕದಲ್ಲಿ 1ನೇ ಹಂತದ ಚುನಾವಣೆ ಪ್ರಕ್ರಿಯೆ
ಅಧಿಸೂಚನೆ – 28.03.2024 (ಗುರುವಾರ)
ನಾಮಪತ್ರ ಸಲ್ಲಿಕೆಗೆ ಕೊನೇ ದಿನ – 04.04.2024 (ಗುರುವಾರ)
ನಾಮಪತ್ರ ಪರಿಶೀಲನೆ – 05.04.2024 ಶುಕ್ರವಾರ)
ನಾಮಪತ್ರ ಹಿಂಪಡೆಯಲು ಕೊನೆದಿನ – 08.04.2024 (ಸೋಮವಾರ)
ಮತದಾನ ದಿನಾಂಕ – 26.04.2024 (ಶುಕ್ರವಾರ)
ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)
ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ – 06.06.2024 (ಗುರುವಾರ)
ಇದರಂತೆ, ಕರ್ನಾಟಕದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
ಲೋಕಸಭೆ ಚುನಾವಣೆ 2024; ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ
ಅಧಿಸೂಚನೆ – 12.04.2024 (ಶುಕ್ರವಾರ)
ನಾಮಪತ್ರ ಸಲ್ಲಿಕೆಗೆ ಕೊನೇ ದಿನ – 19.04.2024 (ಶುಕ್ರವಾರ)
ನಾಮಪತ್ರ ಪರಿಶೀಲನೆ – 20.04.2024 (ಶನಿವಾರ)
ನಾಮಪತ್ರ ಹಿಂಪಡೆಯಲು ಕೊನೆದಿನ – 22.04.2024 (ಸೋಮವಾರ)
ಮತದಾನ ದಿನಾಂಕ – 07.05.2024 (ಶನಿವಾರ)
ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)
ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ – 06.06.2024 (ಗುರುವಾರ)
ಇದರಂತೆ, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯದೆ ಇರುವ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಎರಡನೆ ಹಂತದಲ್ಲಿ ಮತದಾನ ನಡೆಯಲಿದೆ.
ಕರ್ನಾಟಕದ ಶೋರಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ
ಲೋಕಸಭೆ ಚುನಾವಣೆಯ ಮೂರನೇ ಹಂತ ನಡೆಯುವಾಗ, ಕರ್ನಾಟಕದ ಶೋರಾಪುರ ವಿಧಾಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.
ಇದಕ್ಕೆ ಅಧಿಸೂಚನೆ ಏಪ್ರಿಲ್ 12ಕ್ಕೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಕೊನೇ ದಿನ ಏಪ್ರಿಲ್ 19. ನಾಮಪತ್ರ ಪರಿಶೀಲನೆ ಏಪ್ರಿಲ್ 20ರಂದು ನಡೆಯಲಿದ್ದು, ಏಪ್ರಿಲ್ 22ಕ್ಕೆ ನಾಮಪತ್ರ ಹಿಂಪಡೆಯಲು ಕೊನೇದಿನ.
ಮತದಾನ ದಿನಾಂಕ – 07.05.2024 (ಶನಿವಾರ)
ಮತ ಎಣಿಕೆ ದಿನ/ ಫಲಿತಾಂಶ – 04.06.2024 (ಮಂಗಳವಾರ)