PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಅರಸೀಕೆರೆ ರಣರಂಗಕ್ಕೆ ಎಚ್‌.ಡಿ. ರೇವಣ್ಣಗೆ ಆಹ್ವಾನ: ‘ತಾಕತ್ತಿದ್ದರೆ ಬನ್ನಿ’ ಎಂದು ಗುಡುಗಿದ ಕೆ.ಎಂ.ಶಿವಲಿಂಗೇಗೌಡ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮುಖಪುಟ > ಅರಸೀಕೆರೆ ರಣರಂಗಕ್ಕೆ ಎಚ್‌.ಡಿ. ರೇವಣ್ಣಗೆ ಆಹ್ವಾನ: ‘ತಾಕತ್ತಿದ್ದರೆ ಬನ್ನಿ’ ಎಂದು ಗುಡುಗಿದ ಕೆ.ಎಂ.ಶಿವಲಿಂಗೇಗೌಡ
ಮುಖಪುಟರಾಜಕೀಯ

ಅರಸೀಕೆರೆ ರಣರಂಗಕ್ಕೆ ಎಚ್‌.ಡಿ. ರೇವಣ್ಣಗೆ ಆಹ್ವಾನ: ‘ತಾಕತ್ತಿದ್ದರೆ ಬನ್ನಿ’ ಎಂದು ಗುಡುಗಿದ ಕೆ.ಎಂ.ಶಿವಲಿಂಗೇಗೌಡ

Prathinidhi News
Last updated: January 13, 2026 5:01 pm
Prathinidhi News
Published January 13, 2026
Share
SHARE

ಅರಸೀಕೆರೆ, ಜನವರಿ 13, 2026: “ಇದು ಬರಿ ಮಾತಲ್ಲ, ರಾಜಕೀಯ ಮಹಾಭಾರತದ ಘೋಷಣೆ. ಅರಸೀಕೆರೆಯಲ್ಲಿ ನೆಲೆ ಇಲ್ಲದವರು ಇಲ್ಲಿ ಬಂದು ಸ್ಪರ್ಧಿಸುವ ಕನಸು ಕಾಣುತ್ತಿದ್ದಾರೆ. ತಾಕತ್ತಿದ್ದರೆ 2028ರ ಚುನಾವಣೆಗೆ ಅರಸೀಕೆರೆಯಿಂದಲೇ ಸ್ಪರ್ಧಿಸಿ, ಇಲ್ಲಿನ ಜನರೇ ನಿಮಗೆ ಉತ್ತರ ನೀಡುತ್ತಾರೆ,” ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ನೇರ ಪಂಥಾಹ್ವಾನ ನೀಡಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಚರಣಾ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ  ಮಾತನಾಡಿದ ಅವರು, ಅರಸೀಕೆರೆ ನಿಮ್ಮ ಆಸ್ತಿಯಲ್ಲ: “ಐವತ್ತು ಜನರನ್ನು ಹಿಂದೆ ಹಾಕಿಕೊಂಡು ಬಂದು ಅರಸೀಕೆರೆಯಲ್ಲಿ ಸಭೆ ಮಾಡಿದರೆ ಇಲ್ಲಿನ ಬಿ ಹೆದರುವುದಿಲ್ಲ. ಅರಸೀಕೆರೆಗೆ ನೀವು ಮಾಡಿರುವ ಕೊಡುಗೆ ಶೂನ್ ನಾನು ಸೋತ ನಂತರ ಈ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವೇ ಇಲ್ಲದಂತಾಗಿದೆ. ನನ್ನ ವೈಯಕ್ತಿಕ ಶಕ್ತಿ ಮತ್ತು ಜನರ ವಿಶ್ವಾಸದಿಂದ ನಾನು ಗೆದ್ದಿದ್ದೇನೆ ಹೊರತು ನಿಮ್ಮಿಂದಲ್ಲ.”

ಅಭಿವೃದ್ಧಿ ರಾಜಕಾರಣ: “ಕ್ಷೇತ್ರದ ಅಭಿವೃದ್ಧಿಗಾಗಿ ನಾನು

ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರ ಕಾಲು ಹಿಡಿದು ಅನುದಾನ ತಂದಿದ್ದೇನೆ. ಅರಸೀಕೆರೆಗೆ ಮಂಜೂರಾಗಿದ್ದ ಇಂಜಿನಿಯರಿಂಗ್‌ ಕಾಲೇಜನ್ನು ರಾತ್ರೋರಾತ್ರಿ ಮೊಸಳೆಹೊಸಳ್ಳಿಗೆ ಹೊತ್ತೊಯ್ದ ಇತಿಹಾಸ ನಿಮ್ಮದು. ನಾನು ಮಾಡಿರುವ ಕೆಲಸಗಳ ಪಟ್ಟಿಯನ್ನು ಶೀಘ್ರವೇ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡುತ್ತೇನೆ. ಹಾಗೂ ಎತ್ತಿನಹೊಳೆ ನೀರು ಬಂದರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದಿದ್ದಿರಲ್ಲವೇ? ಬರುವ ಜೂನ್ ತಿಂಗಳಿಗ ನೀರು ಬಂದು ಕೆರೆಗಳು ತುಂಬಲಿವೆ. ಆಗ ನಿಮ್ಮ ಮಾತಿನಂತೆ ನಡೆದುಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದರು. ವಂಶಪಾರಂಪರ್ಯ ರಾಜಕಾರಣಕ್ಕೆ ಟಾಂಗ್: “ಬರೀ ನೀವು, ನಿಮ್ಮ ಮನೆ, ನಿಮ್ಮ ಮನೆತನ ಅಷ್ಟೇ ಬೆಳೆಯಬೇಕೇ? ಹಾಸನ ಜಿಲ್ಲೆಯಲ್ಲಿ ಬೇರೆಯವರು ಬೆಳೆಯಬಾರದೇ? ನಾನು ಕಾಂಗ್ರೆಸ್‌ಗೆ ಕದ್ದುಮುಚ್ಚಿ ಹೋಗಿಲ್ಲ, ಅರಸೀಕೆರೆಯ ಜನರಿಗಾಗಿ ಬಹಿರಂಗವಾಗಿಯೇ ನಿರ್ಧಾರ ತಳೆದಿದ್ದೇನೆ. ನಮ್ಮ ಅಪ್ಪ ಹೆಬ್ಬೆಟ್ಟು ಒತ್ತುವ ರೈತ ಇರಬಹುದು, ಆದರೆ ಹೊಲದಲ್ಲಿ ಸಾಲು ಹೊಡೆಯುವುದು ನಮಗೆ ಗೊತ್ತು. ಅರಸೀಕೆರೆ ಜನ ಪ್ರಬುದ್ಧರಾಗಿದ್ದಾರೆ, ಹಿಂದಿನ ರೀತಿ ಅವರಿಗೆ ಮೋಸ ಮಾಡಲು ಸಾಧ್ಯವಿಲ್ಲ. ನಾನು ಇರುವವರೆಗೂ ಈ ಕ್ಷೇತ್ರದಲ್ಲಿ ನಿಮ್ಮ ಆಟ ನಡೆಯದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ನುಡಿದರು.

- ಜಾಹೀರಾತು -

ಚುನಾವಣಾ ಕಣ ಸಜ್ಜು:

2028ರ ಚುನಾವಣೆಯಲ್ಲಿ ಎಚ್.ಡಿ. ರೇವಣ್ಣ ಅವರು ಅರಸೀಕೆರೆಯಿಂದ ಸ್ಪರ್ಧಿಸಬೇಕೆಂದು ಜೆಡಿಎಸ್‌ ಮುಖಂಡರು ಒತ್ತಾಯಿಸುತ್ತಿರುವ ಬೆನ್ನಲ್ಲೇ, ಶಿವಲಿಂಗೇಗೌಡರು ನೀಡಿರುವ ಈ ‘ರಣಕಳೆ’ ಹೇಳಿಕೆ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. “ಒಕ್ಕಲಿಗರು ದೇವೇಗೌಡರನ್ನು ಬಿಟ್ಟು ವೋಟು ಹಾಕಲ್ಲ ಎನ್ನುತ್ತಿದ್ದವರು, ನನಗೆ ಯಾಕೆ ಮತ ಹಾಕಿದರು ಎಂದು ಯೋಚಿಸಿ ಹೇಳಿದರು.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರಸಿನಿಮಾ

‘ಮ್ಯಾಕ್ಸ್’ ಅಬ್ಬರ: ಮೈಸೂರಿನ ಸಂಗಮ್ ಚಿತ್ರಮಂದಿರಕ್ಕೆ ನಟ ಕಿಚ್ಚ ಸುದೀಪ್ ಭೇಟಿ!

January 1, 2026
ಕ್ರೈಂ ಸುದ್ದಿಗಳುತುಮಕೂರುಮುಖಪುಟ

ತಾಯಿಗೆ ಹೊಡೆದ ತಂದೆ : ಮಲತಂದೆಯನ್ನು ಭೀಕರವಾಗಿ ಹತ್ಯೆ ಮಾಡಿದ ಮಗ

January 14, 2026
ಬೆಂಗಳೂರುಮುಖಪುಟ

ಬೆಂಗಳೂರು : ಮಕ್ಕಳಿಗಾಗಿ ಇದೇ ಮೊದಲ ಬಾರಿಗೆ ಕಬ್ಬನ್‌ ಪಾರ್ಕ್‌ ನಲ್ಲಿ ಫ್ಲವರ್‌ ಶೋ

November 27, 2025
ಮುಖಪುಟಮೈಸೂರು ನಗರ

ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಎನ್‌ಸಿಬಿ ತಪಾಸಣೆ: ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಕಮಿಷನರ್ ಸ್ಪಷ್ಟನೆ

January 29, 2026
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?