ಮೈಸೂರು, ನವೆಂಬರ್ 22, 2025 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಹಾಗೂ ನೂತನವಾಗಿ ಆಯ್ಕೆಯಾದ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸುವ ಸಮಾರಂಭವು ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಂಶಿ ಪ್ರಸನ್ನಕುಮಾರ್ ಅವರನ್ನು ಗೌರವಿಸಲಾಯಿತು. ಅದೇ ರೀತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತರಾದ ದಯಾಶಂಕರ ಮೈಲಿ, ಧರ್ಮಾಪುರ ನಾರಾಯಣ್, ವೀರಭದ್ರಪ್ಪ ಬಿಸ್ಲಳ್ಳಿ, ಎಚ್ ಎಸ್ ದಿನೇಶ್‍ಕುಮಾರ್, ಮಹೇಶ್ ಭಗೀರಥ, ಶೇಖರ್ ಕಿರಗುಂದ, ಎಂ ಟಿ ಯೋಗೇಶ್ ಕುಮಾರ್, ಕೆ ಬಿ ರಮೇಶ್ ನಾಯಕ, ಎಂ ಎ ಶ್ರೀರಾಮ್, ಹಂಪಾ ನಾಗರಾಜ್, ಸುಧೀಂದ್ರ ಕುಮಾರ್, ಹಾಗೂ ಈ ಕಾರ್ತಿಕ್ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ರಾಘವೇಂದ್ರ ಅವರಿಗೂ ಈ ವೇಳೆ ಅಭಿನಂದನೆ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತರಿಗೆ ಗೌರವ
ಸಮಾರಂಭದಲ್ಲಿ ರಾಜ್ಯ ಮಾಹಿತಿ ಆಯುಕ್ತರು ಹಾಗು ಹಿರಿಯ ಪತ್ರಕರ್ತರುಗಳಾದ ರುದ್ರಣ್ಣ ಹರ್ತಿಕೋಟಿ, ಕೆ ಬದ್ರುದ್ದೀನ್, ಎಸ್ ರಾಜಶೇಖರ್, ಡಾ. ಹರೀಶ್ ಕುಮಾರ್ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ ದೀಪಕ್, ಉಪಾಧ್ಯಕ್ಷರಾದ ರವಿ, ಪ್ರತಿನಿಧಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಸಿ ಕೆ ಮಹೇಂದ್ರ ಸೇರಿದಂತೆ ಹಲವು ಗಣ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
