ಬಿಹಾರದಲ್ಲಿ ಜಾತಿ ಗಣತಿ ವರದಿ ಪ್ರಕಟವಾದ ಬೆನ್ನಲ್ಲೆ ಇದೀಗ ಕರ್ನಾಟಕ ರಾಜ್ಯದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹಸಚಿವ ಡಾಜಿ.ಪರಮೇಶ್ವರ್, ಜಾತಿಗಣತಿ ಬಿಡುಗಡೆಯಾದ್ರೆ ಒಳ್ಳೆಯದು ಎಂದಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಡಾಜಿ.ಪರಮೇಶ್ವರ್, ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಸಿದ ಬಳಿಕ ಚರ್ಚೆ ಮಾಡೋಣ ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಜಾತಿ ಗಣತಿ ನಡೆಸಲು ಅಂದಾಜು 100 ಕೋಟಿ ರೂ.ಗೆ ಹೆಚ್ಚು ಖರ್ಚಾಗಿದೆ. ಇಷ್ಟು ಹಣ ಖರ್ಚು ಮಾಡಿ ವರದಿ ಬಿಡುಗಡೆ ಮಾಡದಿದ್ದರೇ ವ್ಯರ್ಥ ಅಲ್ಲವಾ..? ಜಾತಿಗಣತಿ ಬಿಡುಗಡೆಯಾದ್ರೆ ಒಳ್ಳೆಯದು ರಾಜ್ಯದಲ್ಲಿ ಮೀಸಲಾತಿ ಕೂಗು ಕೇಳಿಬಂದಿದೆ. ಸರ್ಕಾರ ದುಂದುವೆಚ್ಚಕ್ಕಾಗಿ ಜಾತಿ ಗಣತಿ ಮಾಡಿಲ್ಲ ಎಂದರು.