ಪ್ರಥಮ ಪೂಜಿತ ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಏರಿಯಾ ಏರಿಯಾಗಳಲ್ಲಿ ಗೌರಿ-ಗಣೇಶನನ್ನು ಕೂರಿಸಿ ಸಂಭ್ರಮಿಸಲು ಯುವಕರು ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಕೂರಿಸುವ ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆ ಗೌರಿ ಗಣೇಶ ಹಬ್ಬಕ್ಕೆ ನಗರ ಪೊಲೀಸ್ ಇಲಾಖೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಕಾರ್ಯಕ್ರಮದ ಆಯೋಜಕರು ಪಾಲಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದ ಆಯೋಜಕರು ಪಾಲಿಸಬೇಕಾದ ಕ್ರಮಗಳು
- ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲು ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಕಡ್ಡಾಯ
- ಗಣೇಶ ಕೂರಿಸಲು ಕಾನೂನು ಬಾಹಿರಬಾಗಿ ಹಣ ಸಂಗ್ರಹ ಮಾಡುವಹಾಗಿಲ್ಲ
- ಕಾರ್ಯಕ್ರಮ ನಡೆಸಲು ಚಪ್ಪರ, ಶಾಮಿಯಾನ, ಪೆಂಡಾಲ್ ಗೆ ವಿಶೇಷ ಅನುಮತಿ ಪಡೆಯಬೇಕು
- ವಿವಾದಿತ ಜಾಗದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವಹಾಗಿಲ್ಲ
- ಮೆರವಣಿಗೆ ವೇಳೆ ಏನೇ ಅಹಿಕತರ ಘಟನೆ ನಡೆದರೆ ಸಂಘಟಕರೇ ಅದಕ್ಕೆ ಹೊಣೆ
- ಆಯೋಜಕರು ಕಾರ್ಯಕ್ರಮ ನಡೆಯುವ ಜಾಗದಲ್ಲಿ ಬೆಂಕಿ ನಂದಿಸುವ ಸಾಮಾಗ್ರಿಗಳು, ಸಿಸಿಟಿವಿ ಸೇರಿದಂತೆ ಅಗತ್ಯ ಕ್ರಮವಹಸಿಬೇಕು
- ಮೂರ್ತಿ ಸ್ಥಾಪನೆಮಾಡಿರುವ ಜಾಗದಲ್ಲಿ ಕಟ್ಟಿಗೆ, ಉರುವಲು, ಸೀಮೆ ಎಣ್ಣೆ ಒಟ್ಟಾರೆ ಬೆಂಕಿ ಸಂಬಂಧಿಸಿದ ಸಾಮಾಗ್ರಿಗಳನ್ನು ಇಡಬಾರದು
- ವಿದ್ಯುತ್ ಸಂಪರ್ಕ ಬೇಕಾಗಿರುವ ಬಗ್ಗೆ ಬೆಸ್ಕಾಂ ಮತ್ತು ಅಗ್ನಿ ಶಾಮಕ ಇಲಾಖೆಯ NOC ಕಡ್ಡಾಯ
- ಧ್ವನಿ ವರ್ಧಕ ಬಳಕೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಡೆಡ್ ಲೈನ್
- ಯಾವುದೇ ಕಾರಣಕ್ಕೂ DJ ಸೌಂಡ್ ಸಿಸ್ಟಮ್ ಅಳವಡಿಕೆಗೆ ಅವಕಾಶ ಇಲ್ಲ
- ಮೆರವಣಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಪ್ರಾರ್ಥನೆ ಸ್ಥಳಗಳ ಮುಂಭಾಗದಲ್ಲಿ ಪಟಾಕಿ, ಸಿಡಿ ಮದ್ದು ನಿಷೇಧ
- ಗಣಪನ ವಿಸರ್ಜನೆ ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕುಬೆಂಗಳೂರು ಪೊಲೀಸರು ಗಣೇಶ ಕೂರಿಸುವ ಕಾರ್ಯಕ್ರಮದ ವರ್ತಕರಿಗೆ ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.