ಕೋಲಾರ:ನಗರದ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ ಉಚಿತ ಮೊಬೈಲ್ ರಿಪೇರಿ ಮತ್ತು ಸರ್ವೀಸ್ ತರಬೇತಿ ಹಮ್ಮಿಕೊಳ್ಳಲಾಗಿದೆ.
ಮೇ.೩ರಂದು ಶುಕ್ರವಾರ ಸಂದರ್ಶನವಿದ್ದು, ಆಸಕ್ತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾ) ಜಿಲ್ಲೆಯ ೧೮ ರಿಂದ ೪೫ ವರ್ಷ ವಯೋಮಿತಿಯುಳ್ಳವರು ರೇಷನ್ ಕಾರ್ಡ್, ಆಧಾರ್ ಕಾಡ್, ೩ ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು.
ತರಬೇತಿಯು ೩೦ ದಿನಗಳ ಕಾಲಾವಧಿಯದಾಗಿದ್ದು, ತರಬೇತಿ ಅವಧಿಯಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತದೆ. ಅಭ್ಯರ್ಥಿಗಳಿಗೆ ತರಬೇತಿ ವೇಳೆ ಉಚಿತವಾಗಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ತರಬೇತಿ ನಂತರ ಕೇಂದ್ರ ಸರ್ಕಾರದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ತರಬೇತುದಾರರ ಮೊ.೮೯೭೧೩೦೮೭೭೬, ೭೭೬೦೩೧೩೮೩೩, ೯೪೮೩೬೫೨೨೪೦, ಸಂಪರ್ಕಿಸಬಹುದಾಗಿದೆ.