ಮೈಸೂರು, ಏಪ್ರಿಲ್ 20, 2026 : ನಗರದಲ್ಲಿ ಬಸವೇಶ್ವರ ಜಯಂತಿಯನ್ನು ಕೃಷ್ಣರಾಜ ಯುವ ಬಳಗದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಗನ್ ಹೌಸ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶರಣರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಲಾಯಿತು.
ಪ್ರಸ್ತುತ ನಗರದಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ಅವರ ನೇತೃತ್ವದಲ್ಲಿ ತಂಪಾದ ಬಾದಾಮಿ ಹಾಲನ್ನು ವಿತರಿಸಲಾಯಿತು. ದಾರಿಹೋಕರು ಹಾಗೂ ಸಾರ್ವಜನಿಕರು ಬಾದಾಮಿ ಹಾಲು ಸೇವಿಸಿ ಬಿಸಿಲಿನ ಬೇಗೆಯಿಂದ ಸ್ವಲ್ಪ ನಿರಾಳರಾದರು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ, ಮಾಜಿ ನಗರ ಪಾಲಿಕಾ ಸದಸ್ಯರಾದ ಕೆ.ವಿ. ಮಲ್ಲೇಶ್, ಕೆ.ವಿ. ಶ್ರೀಧರ್, ಜಗದೀಶ್, ಹಾಗೂ ಪ್ರಮುಖರಾದ ಮಂಚೇಗೌಡನ ಕೊಪ್ಪಲ್ ರವಿ, ಗುಡ್ಡಪ್ಪ ಶಿವಣ್ಣ, ಜೀವದಾರ ಗಿರೀಶ್, ದೂರ ರಾಜಣ್ಣ, ಸ್ಮಾರ್ಟ್ ಮಂಜು, ಗಣೇಶ್ ಮೂರ್ತಿ ಸೇರಿದಂತೆ ಕೃಷ್ಣರಾಜ ಯುವ ಬಳಗದ ಸದಸ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು.
