ಏ. 11 ರವರೆಗಿನ ಅಭ್ಯರ್ಥಿಗಳ ಚುನಾವಣಾ ವೆಚ್ಚದ ವಿವರ
ಪ್ರತಿನಿಧಿ ವರದಿ ಚಾಮರಾಜನಗರ : ಲೋಕಸಭಾ ಚುನಾವಣೆ-2024ರ ಸಂಬಂಧ ಚಾಮರಾಜನಗರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ಏ. 11 ರವರೆಗಿನ ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸಿದ್ದು, ಏ. 13ರಂದು ನಡೆದ ಮೊದಲ ವೆಚ್ಚ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸಲಾಗಿರುವ ವಿವರ ಇಂತಿದೆ.
ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಎಂ. ಕೃಷ್ಣಮೂರ್ತಿ ಅವರು ರೂ. 46,250, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಎಸ್. ಬಾಲರಾಜು ಅವರು 13,98,165 ರೂ., ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಅವರು 16,45,009 ರೂ., ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಸಿ.ಎಂ. ಕೃಷ್ಣ ಅವರು 12,500 ರೂ., ಕರ್ನಾಟಕ ಜನತಾ ಪಾರ್ಟಿ (ಕೆ.ಜಿ.ಪಿ) ಅಭ್ಯರ್ಥಿ ನಿಂಗರಾಜು. ಎಸ್ ಅವರು 12,500ರೂ., ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಅಭ್ಯರ್ಥಿ ಪ್ರಸನ್ನ ಕುಮಾರ್. ಬಿ ಅವರು 12,500 ರೂ., ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷದ ಅಭ್ಯರ್ಥಿ ಮಹೇಶ್. ಎಂ ಅವರು 14,375 ರೂ., ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ಸುಮ. ಎಸ್. ಅವರು 20,586 ರೂ., ಪಕ್ಷೇತರ ಅಭ್ಯರ್ಥಿಗಳಾದ ಅಂಬರೀಷ್ ಅವರು 12,500 ರೂ., ನಿಂಗರಾಜು. ಜಿ ಅವರು 12,500 ರೂ., ಪ್ರದೀಪ್ ಕುಮಾರ್.ಎಂ ಅವರು 12,500 ರೂ., ಮಹದೇವಸ್ವಾಮಿ. ಬಿ.ಎಂ ಅವರು 12,500 ರೂ., ಜಿ.ಡಿ. ರಾಜಗೋಪಾಲ ಅವರು 13,680 ರೂ. ಹಾಗೂ ಹೆಚ್.ಕೆ. ಸ್ವಾಮಿ ಅವರು 12,500 ರೂ. ಗಳ ಚುನಾವಣಾ ವೆಚ್ಚದ ವಿವರ ಸಲ್ಲಿಸಿದ್ದಾರೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.