ಮೈಸೂರು, ಮಾರ್ಚ್ 5, 2026 : ಇಂದು ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್‌ನ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಲಿ ಎಂದು ಮೈಸೂರಿನ ಕ್ರಿಕೆಟ್ ಅಭಿಮಾನಿಗಳು ವಿಶೇಷವಾಗಿ ಶುಭ ಕೋರಿದ್ದಾರೆ. ನಗರದ ಐತಿಹಾಸಿಕ ಓವಲ್ ಕ್ರೀಡಾಂಗಣದಲ್ಲಿ ಜಮಾಯಿಸಿದ ನೂರಾರು ಕ್ರಿಕೆಟ್ ಪ್ರೇಮಿಗಳು, ಕೈಯಲ್ಲಿ ಭಾರತದ ರಾಷ್ಟ್ರಧ್ವಜ ಹಿಡಿದು ತಂಡದ ಪರ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿಗಳು, ಭಾರತ ತಂಡವು ಅದ್ಭುತ ಫಾರ್ಮ್‌ನಲ್ಲಿದ್ದು ಈ ಬಾರಿಯ ವಿಶ್ವಕಪ್ ಮುಡಿಗೇರಿಸಿಕೊಳ್ಳುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂಭ್ರಮದ ಹಾರೈಕೆ ಕಾರ್ಯಕ್ರಮದಲ್ಲಿ ಪ್ರಮುಖರಾದ ನಜರ್ಬಾದ್ ನಟರಾಜ್, ಬಸವರಾಜ್ ಬಸಪ್ಪ, ರಮೇಶ್ ರಾಮಪ್ಪ, ವಿನಯ್ ಕುಮಾರ್, ರವಿಚಂದ್ರ, ಎಸ್.ಎನ್. ರಾಜೇಶ್, ನವೀನ್ ಕೆಂಪಿ ಸೇರಿದಂತೆ ಹಲವು ಕ್ರೀಡಾಭಿಮಾನಿಗಳು ಭಾಗವಹಿಸಿ ಭಾರತ ತಂಡಕ್ಕೆ ವಿಜಯೀ ಭವ ಎಂದು ಹಾರೈಸಿದರು.
